ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ
ಮೈಸೂರು

ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ

July 10, 2018

ಮೈಸೂರು:  ಪ್ರೊ. ರಾಜಣ್ಣನವರನ್ನು ಸಾಮಾಜಿಕ ನ್ಯಾಯದಡಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕ ಮಾಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಮಾನವ ನೌಕರರ ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್ ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳಿದ್ದು, ಇಲ್ಲಿಯವರೆಗೆ ಗುಲ್ಬರ್ಗಾ ವಿವಿಯಲ್ಲಿ ಮಾತ್ರ ಕುಲಪತಿ ನೇಮಕವಾಗಿರುತ್ತದೆ. ಆದರೆ ಇದುವರೆವಿಗೂ ಮೈಸೂರು ವಿವಿಗೆ ನಾಯಕ ಸಮುದಾಯದ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಿಲ್ಲ. ಕೇವಲ ಇಬ್ಬರನ್ನು ಮಾತ್ರ ಕುಲಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ನಾಯಕ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿವಿಯಲ್ಲಿ ಇದುವರೆವಿಗೂ ನಾಯಕ ಸಮುದಾಯದ ಯಾರೂ ಕೂಡ ಕುಲಪತಿಯಾಗಿ ಕಾರ್ಯನಿರ್ವಹಿಸಿಲ್ಲ. ಆದ್ದರಿಂದ ಕಳೆದ ಒಂದೂವರೆ ವರ್ಷದಿಂದ ಖಾಲಿಯಾಗಿರುವ ಮೈಸೂರು ವಿವಿ ಕುಲಪತಿ ಸ್ಥಾನಕ್ಕೆ ಕುಲಸಚಿವರಾಗಿರುವ ಪ್ರೊ. ಆರ್. ರಾಜಣ್ಣನವರನ್ನು ನೇಮಕ ಮಾಡುವ ಮೂಲಕ ನಾಯಕ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Translate »