ಮೃತದೇಹ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ತಾಯಿ, ಪತ್ನಿ
ಹಾಸನ

ಮೃತದೇಹ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ತಾಯಿ, ಪತ್ನಿ

August 18, 2018

ಹಾಸನ: – ನನ್ನ ಮಗನ ನೋಡಿ ನಾಲ್ಕು ದಿನಗಳಾಗಿವೆ. ಮಗನ ಮುಖ ತೋರಿಸವ್ವಾ….. ಎಂದು ಹೆತ್ತಕರುಳೊಂದು ಗೋಳಾಡುತ್ತಾ ಕಾಲಿಗೆರುವ ದೃಶ್ಯ ಒಂದೆಡೆಯಾದರೆ, ನನ್ನ ಕಂದನಿಗೆ ಅಪ್ಪನ ಮುಖ ತೋರಿಸಿ ಎಂದು ಕಣ್ಣೀರಿಡುತ್ತಾ ಹಸುಗೂಸಿನೊಂದಿಗೆ ಮಹಿಳೆ ಅಂಗಲಾ ಚುತ್ತಿದ್ದ ದೃಶ್ಯ ಮತ್ತೊಂದೆಡೆ. ಒಬ್ಬರ ನ್ನೊಬ್ಬರು ಸಮಾಧಾನ ಪಡಿಸುತ್ತಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಇದು ಜಿಲ್ಲಾಡಳಿತ ಕಚೇರಿ ಆವರಣ ದಲ್ಲಿ ಇಂದು ಕಂಡು ಬಂದ ಚಿತ್ರಣ. ಇದರಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಣ್ಣೂ ತುಂಬಿ ಬಂತು ಸಕಲೇಶಪುರ ಸಮೀಪದ ಶಿರಾಡಿ ಘಾಟ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಪ್ರಪಾತಕ್ಕುಳಿದ ಪ್ರಕರಣ ಸಂಭವಿಸಿ 4 ದಿನವಾದರೂ ಚಾಲಕ ಸಂತೋಷ್ ಮೃತದೇಹದ ಪತ್ತೆ ಯಾಗದ್ದರಿಂದ ಪತ್ನಿ ನವ್ಯ ಹಾಗೂ ಸಂತೋಷ್ ತಾಯಿ ಸೇರಿದಂತೆ ಕುಟುಂ ಬಸ್ಥರು, ಗ್ರಾಮಸ್ಥರೊಂದಿಗೆ ಇಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮೃತ ದೇಹ ಹುಡುಕೊಡುವಂತೆ ಕಾಲಿಗೆರಗಿ ಕಣ್ಣೀರಿಟ್ಟು ಅಂಗಲಾಚಿದರು. ಈ ದೃಶ್ಯ ನೆರದಿದ್ದವರ ಮನಕಲಕಿತು.

ನಿರಂತರ ಮಳೆಯಿಂದಾಗಿ ಶಿರಾಡಿ ಘಾಟ್‍ನಲ್ಲಿ ಭೂ ಕುಸಿತದಿಂದ ಗ್ಯಾಸ್ ಟ್ಯಾಂಕರ್ ಪ್ರಪಾತಕ್ಕುರುಳಿ ಟ್ಯಾಂಕರ್ ನಲ್ಲಿದ್ದ ಕ್ಲೀನರ್ ಸಾವನ್ನಪ್ಪಿದ್ದ. ಆದರೆ ವಾಹನದ ಚಾಲಕ ಸಂತೋಷ್ ದೇಹ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ನೊಂದು, ಸಂತೋಷ್ ಮೃತದೇಹ ಹುಡುಕಿ ಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಗಮಿಸಿದ ಮೃತನ ಪತ್ನಿ ಪುಟ್ಟ ಕಂದಮ್ಮ ನೊಂದಿಗೆ ಪತ್ನಿ ಡಿಸಿ ರೋಹಿಣಿ ಸಿಂಧೂರಿ ಬಳಿ ತಮ್ಮ ಅಳಲು ತೋಡಿ ಕೊಂಡರು. ಈ ವೇಳೆ ಡಿಸಿ ರೋಹಿಣಿ ಸಿಂಧೂರಿ ಮಾತನಾಡಿ, ಶಿರಾಡಿಘಾಟ್ ನಲ್ಲಿ ಅತಿಯಾದ ಮಳೆಯಿಂದಾಗಿ ದೊಡ್ಡ ತಪ್ಪಲೆ ಗ್ರಾಮದ ಸಮೀಪ ಭೂ ಕುಸಿತ ಉಂಟಾಗಿ ಗ್ಯಾಸ್ ಟ್ಯಾಂಕರ್ ಪ್ರಪಾತಕ್ಕೆ ಉರುಳಿದೆ. ಈ ಸಮಯದಲ್ಲಿ ಸಾವನ್ನಪ್ಪಿದ ಕ್ಲೀನರ್‍ರನ್ನು ಹೊರ ತೆಗೆಯಲಾಗಿದೆ. ಟ್ಯಾಂಕರ್ ತುಂಬ ಆಳಕ್ಕೆ ಬಿದ್ದಿರುವು ದರಿಂದ ಚಾಲಕನ ದೇಹ ಇನ್ನೂ ಪತ್ತೆಯಾಗಿಲ್ಲ. ಪಂಪ್ ಮತ್ತು ಮೋಟರ್ ಹಾಕಿ ನೀರು ತೆಗೆದರೂ ಕೂಡ ಮಳೆ ಬರುತ್ತಿರುವುದರಿಂದ ಕಾರ್ಯಾಚರಣೆ ಕಷ್ಟವಾಗಿದೆ. ಈ ಬಗ್ಗೆ ನಾವು ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು, ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾ ಗುತ್ತಿದೆ. ಹೆಚ್ಚುವರಿ ತಂಡ ಗಳೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹ ಹುಡುಕಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಂತೋಷ್ ತಾಯಿ, ಪತ್ನಿ ಅಂಗಲಾ ಚುವಿಕೆ ಪರಿಯಿಂದ ಇಡೀ ಜಿಲ್ಲಾಧಿಕಾರಿ ಕಚೇರಿ ಆವರಣವೇ ಕೆಲಕಾಲ ಶೋಕ ಸಾಗರದಲ್ಲಿ ಮುಳುಗಿತು.

Translate »