ವಾಡಿಕೆ ಮಳೆ 125 ಮಿ.ಮೀ, ಆಗಿರುವುದು 193 ಮಿ.ಮೀ ಬೆಂಗಳೂರು: ಅವಧಿಗೂ ಮುನ್ನ ಪ್ರಾರಂಭವಾದ ಮುಂಗಾರು 104 ಜನರನ್ನು ಬಲಿ ತೆಗೆದು ಕೊಂಡಿದೆ. ಅಷ್ಟೇ ಅಲ್ಲ ಜನರ ಸಾವು-ನೋವಿನ ಜೊತೆಗೆ ಜಾನುವಾರುಗಳು ಭಾರೀ ಪ್ರಮಾಣದಲ್ಲಿ ಅಸು ನೀಗಿರು ವುದಲ್ಲದೆ, ಪೂರ್ಣ ಹಾಗೂ ಭಾಗಶಃ ಮನೆ ಕಳೆದು ಕೊಂಡು ಹಲವರು ನಿರ್ಗತಿಕರಾಗಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಈ ಅಂಕಿ-ಅಂಶ ನೀಡಿದ ನೂತನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಿಡಿಲಿನಿಂದ 94 ಮಂದಿ, ನೀರಿನಲ್ಲಿ ಕೊಚ್ಚಿ ಹೋಗಿ 10 ಮಂದಿಯ ಜೀವ ಹಾನಿಯಾಗಿದೆ….