ಮುಂಗಾರು ಆರ್ಭಟಕ್ಕೆ 104 ಮಂದಿ ಬಲಿ
ಮೈಸೂರು

ಮುಂಗಾರು ಆರ್ಭಟಕ್ಕೆ 104 ಮಂದಿ ಬಲಿ

June 12, 2018
  • ವಾಡಿಕೆ ಮಳೆ 125 ಮಿ.ಮೀ, ಆಗಿರುವುದು 193 ಮಿ.ಮೀ

ಬೆಂಗಳೂರು: ಅವಧಿಗೂ ಮುನ್ನ ಪ್ರಾರಂಭವಾದ ಮುಂಗಾರು 104 ಜನರನ್ನು ಬಲಿ ತೆಗೆದು ಕೊಂಡಿದೆ. ಅಷ್ಟೇ ಅಲ್ಲ ಜನರ ಸಾವು-ನೋವಿನ ಜೊತೆಗೆ ಜಾನುವಾರುಗಳು ಭಾರೀ ಪ್ರಮಾಣದಲ್ಲಿ ಅಸು ನೀಗಿರು ವುದಲ್ಲದೆ, ಪೂರ್ಣ ಹಾಗೂ ಭಾಗಶಃ ಮನೆ ಕಳೆದು ಕೊಂಡು ಹಲವರು ನಿರ್ಗತಿಕರಾಗಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಈ ಅಂಕಿ-ಅಂಶ ನೀಡಿದ ನೂತನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಿಡಿಲಿನಿಂದ 94 ಮಂದಿ, ನೀರಿನಲ್ಲಿ ಕೊಚ್ಚಿ ಹೋಗಿ 10 ಮಂದಿಯ ಜೀವ ಹಾನಿಯಾಗಿದೆ. ಜೀವ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ, ಮನೆ ಮತ್ತು ಜಾನುವಾರು ಕಳೆದುಕೊಂಡ ವರಿಗೆ ಪರಿಹಾರ ಕಾರ್ಯ ನಡೆದಿದೆ. ಮಳೆಯಿಂದ ಎಲ್ಲಿಯೂ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಗಳ ಬಳಿ 186.60 ಕೋಟಿ ರೂ. ಇದೆ. ಅವರು ಸರ್ಕಾ ರದ ಆದೇಶವನ್ನೂ ಕಾಯದೆ, ತುರ್ತು ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವಂತೆ ಆದೇಶ ಮಾಡಲಾಗಿದೆ ಎಂದರು.

ಮಾರ್ಚ್ 1ರಿಂದ ಮೇ 31ರವರೆಗಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 125 ಮಿಲಿ ಮೀಟರ್ ಮಳೆಯಾಗಬೇಕಿತ್ತು, ಆದರೆ 193 ಮಿಲಿ ಮೀಟರ್ ಮಳೆ ಯಾಗಿದ್ದು, ಇದು ವಾಡಿಕೆಗಿಂತ ಶೇ.54ರಷ್ಟು ಹೆಚ್ಚಾಗಿರು ವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲೂ ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ನಮ್ಮ ಎಲ್ಲಾ ಜಲಾಶಯಗಳು ಭರ್ತಿಯಾಗಿ ರೈತರಿಗೆ ನೆಮ್ಮದಿ ತರುವ ಆಶಾಭಾವನೆ ಇದೆ ಎಂದರು. ಉತ್ತಮ ಮಳೆ ಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ ಎಂದರು. ಮುಂಗಾರು ಹಂಗಾಮಿ ನಲ್ಲಿ 74.69 ಲಕ್ಷ ಹೆಕ್ಟೇರ್ಬಿತ್ತನೆ ಗುರಿ ಹೊಂದಲಾಗಿದೆ, ಈ ಸಮಯಕ್ಕೆ 5.65 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕು ಆದರೆ, 5.84 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ ಎಂದು ಅಂಕಿ-ಅಂಶ ನೀಡಿದರು. ಈ ಬಾರಿ ಉತ್ತಮ ಮಳೆಯಾಗಿದ್ದು, 248 ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಅಭಾವ ಇದ್ದು, 401 ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 197 ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಜಿಪಂ ಸಿಇಓಗಳ ಖಾತೆಯಲ್ಲಿ 1 ಕೋಟಿ ರೂ. ಅನುದಾನವಿದ್ದು, ಇದನ್ನು ಬಳಸಿಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಕಂದಾಯ ಇಲಾಖೆಯಲ್ಲಿ ಬಗರ್‍ಹುಕುಂ ಸಾಗುವಳಿದಾರ ರಿಗೆ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು, ಕಾನೂನು ಪ್ರಕಾರ ಎಷ್ಟು ಸಾಧ್ಯವೋ ಅಷ್ಟು ಕ್ರಮ ಕೈಗೊಳ್ಳಲಾಗುವುದು. 1067 ಸರ್ವೆಯರ್ ನೇಮಕ ಮಾಡಿಕೊಳ್ಳಲಾಗಿದೆ.

Translate »