ಮಹಿಳೆ ಕತ್ತು ಹಿಸುಕಿ, ನೀರಲ್ಲಿ ಮುಳುಗಿಸಿ ಹತ್ಯೆ
ಮೈಸೂರು

ಮಹಿಳೆ ಕತ್ತು ಹಿಸುಕಿ, ನೀರಲ್ಲಿ ಮುಳುಗಿಸಿ ಹತ್ಯೆ

June 12, 2018

ಹೆಚ್.ಡಿ.ಕೋಟೆ: ವ್ಯಕ್ತಿಯೋರ್ವ ಪರಿಚಿತ ಮಹಿಳೆಯ ಕತ್ತು ಹಿಸುಕಿ, ನೀರಿನಲ್ಲಿ ಮುಳುಗಿಸಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಹರದನಹಳ್ಳಿ ಹಾಗೂ ಹೊಮ್ಮರಗಳ್ಳಿ ನಡುವಿನ ಕಬಿನಿ ಸೇತುವೆ ಬಳಿ ಸೋಮವಾರ ಸಂಜೆ ನಡೆದಿದೆ. ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ಧರ್ಮೇಶ್ ಎಂಬ ಕಿರಾತಕ, ಅದೇ ಗ್ರಾಮದ ದಾಕ್ಷಾಯಿಣಿ (40) ಅವರನ್ನು ಹತ್ಯೆ ಮಾಡಿದ್ದಾನೆ. ಇವರಿಬ್ಬರ ಗಲಾಟೆಯನ್ನು ದೂರ ದಲ್ಲೇ ಗಮನಿಸಿದ ಹರದನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ರಾಜೇಂದ್ರ ಮತ್ತಿತರರು, ಮಹಿಳೆಯ ರಕ್ಷಣೆಗೆ ಧಾವಿಸುವಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಪರಾರಿಯಾಗಲು ಯತ್ನಿಸಿದ ಕೊಲೆಗಾರನನ್ನು ಬೆನ್ನತ್ತಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕು ಕಂಚಮ್ಮಳ್ಳಿ ಗ್ರಾಮ ದವರಾದ ದಾಕ್ಷಾಯಿಣಿ ಅವರು ನಂಜನಗೂಡು ತಾಲೂ ಕಿನ ಕಪ್ಪಸೋಗೆ ಗ್ರಾಮದ ನಾಗರಾಜು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಗರಾಜು 4 ವರ್ಷಗಳ ಹಿಂದೆ ನಿಧನರಾಗಿದ್ದು, ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ದಾಕ್ಷಾಯಿಣಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸೋಮವಾರ ತವರಿಗೆ ಬಂದಿದ್ದ ದಾಕ್ಷಾಯಿಣಿ , ಮಕ್ಕಳಿಗೆ ಬಟ್ಟೆ, ಪುಸ್ತಕ ಗಳನ್ನು ಕೊಡಿಸಿ, ಪತಿಯ ಊರಿಗೆ ತೆರಳಲು ಸಿದ್ಧರಾಗಿ ದ್ದರು. ಅಷ್ಟರಲ್ಲಿ ಕಂಚುಮಳ್ಳಿ ಗ್ರಾಮದವನೇ ಆದ ಆಟೋ ಚಾಲಕ ಧರ್ಮೇಶ್, ದಾಕ್ಷಾಯಿಣಿ ಅವರಿಗೆ ಕರೆ ಮಾಡಿ, ಕಪ್ಪಸೋಗೆ ಗ್ರಾಮಕ್ಕೆ ಬಂದಿದ್ದಾನೆ. ನಂತರ ಊರಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿದ ದಾಕ್ಷಾಯಿಣಿ , ಧರ್ಮೇಶ್‍ನ ಆಟೋದಲ್ಲಿ ತೆರಳಿದ್ದಾರೆ. ಮಾರ್ಗಮಧ್ಯೆ ಹರದನಹಳ್ಳಿ ಹಾಗೂ ಹೊಮ್ಮರಗಳ್ಳಿ ನಡುವಿನ ಕಬಿನಿ ನದಿ ಸೇತುವೆ ಬಳಿ ಆಟೋ ನಿಲ್ಲಿಸಿದ ಧರ್ಮೇಶ್, ದಾಕ್ಷಾಯಿಣಿ ಯೊಂದಿಗೆ ಜಗಳವಾಡಿ, ಹಲ್ಲೆ ನಡೆಸಿದ್ದಾನೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಹರದನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಸೇರಿದಂತೆ ಕೆಲ ಗ್ರಾಮಸ್ಥರು, ಗಲಾಟೆಯನ್ನು ಕಂಡು, ಹತ್ತಿರಕ್ಕೆ ಹೋಗುವಷ್ಟರಲ್ಲಿ ಧರ್ಮೇಶ್ ಹಾಗೂ ದಾಕ್ಷಾಯಿಣಿ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದ್ಧಾರೆ. ಗ್ರಾಮಸ್ಥರು ಸೇತುವೆ ಕೆಳಗೆ ಇಳಿಯುವಷ್ಟರಲ್ಲಿ ಪಾಪಿ ಧರ್ಮೇಶ್, ದಾಕ್ಷಾಯಿಣಿ ಯ ಕತ್ತು ಹಿಸುಕಿ, ಆಕೆಯನ್ನು ನೀರಿನಲ್ಲಿ ಮುಳುಗಿಸಿ, ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ನಂತರ ಧರ್ಮೇಶ್, ಗ್ರಾಮಸ್ಥರ ಕೈಗೆ ಸಿಗದೆ, ಆಟೋದಲ್ಲೇ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಬೆನ್ನತ್ತಿದ ಗ್ರಾಮಸ್ಥರು, ಹೊಮ್ಮರಗಳ್ಳಿ ಬಳಿ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಟೋ ಚಾಲಕನಾಗಿದ್ದ ಧರ್ಮೇಶ್, ಅವಿವಾಹಿತನಾಗಿದ್ದು ಒಂಟಿಯಾಗಿದ್ದ ದಾಕ್ಷಾಯಿಣಿ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಕೆಲ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.

ಆದರೂ ತವರಿನಲ್ಲಿದ್ದ ದಾಕ್ಷಾಯಿಣಿ ಯವರನ್ನು ಆಟೋದಲ್ಲಿ ಕರೆತಂದು ಹತ್ಯೆ ಮಾಡಲು ಕಾರಣವೇನೆಂಬುದು ತಿಳಿದು ಬಂದಿಲ್ಲ. ನಿಲ್ಲಿಸಿದ್ದ ಆಟೋ ಬಳಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಕತ್ತು ಹಿಸುಕುತ್ತಿದ್ದ. ಇದನ್ನು ಕಂಡು ನಾನು ಕೂಗಿಕೊಂಡೆ. ಏಕೆ ಹೊಡೆಯುತ್ತಿದ್ದೀಯಾ, ಇರಪ್ಪ ಬರ್ತೀವಿ ಎಂದು ಹತ್ತಿರಕ್ಕೆ ಓಡಿದೆವು. ಅಷ್ಟರಲ್ಲಿ ಮಹಿಳೆಯನ್ನು ಎಳೆದುಕೊಂಡು ಸೇತುವೆ ಬದಿಯಲ್ಲಿ ಕೆಳಗೆ ಉರುಳಿದ. ನಾವು ಓಡಿ ಹೋಗಿ ಕೆಳಗೆ ಇಳಿಯುವಷ್ಟರಲ್ಲಿ ಆಕೆಯನ್ನು ಹತ್ಯೆ ಮಾಡಿ, ಪರಾರಿಯಾಗಲು ಯತ್ನಿಸಿದ. ಆತನನ್ನು ಹಿಡಿಯುವಂತೆ ಕೂಗಿದ್ದರಿಂದ ನಮ್ಮ ಹುಡುಗರು ಬೆನ್ನತ್ತಿ ಹಿಡಿದು ಕರೆತಂದರು. ವಿಚಾರಿಸಿದಾಗ ಆತ ಕಂಚಮ್ಮಳ್ಳಿಯ ಧರ್ಮೇಶ್ ಎಂದು ಹೇಳಿದ. ಹತ್ಯೆಯಾದ ಮಹಿಳೆ ಅದೇ ಗ್ರಾಮದ ದಾಕ್ಷಾಯಿಣಿ ಎಂದು ತಿಳಿಯಿತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆವು. ಒಂದೇ ಒಂದು ನಿಮಿಷದಲ್ಲಿ ಈ ದುರ್ಘಟನೆ ನಡೆದುಹೋಯಿತು ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸರು ಸ್ಥಳಕ್ಕಾಗಮಿಸಿ, ಮಹಜರು ನಡೆಸಿ, ದ್ರಾಕ್ಷಾಯಿಣಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಅಲ್ಲದೆ ಕೊಲೆಪಾತಕ ಧರ್ಮೇಶ್‍ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ದ್ರಾಕ್ಷಾಯಿಣಿ ಹತ್ಯೆ ಪ್ರಕರಣದ ಹಿಂದಿರುವ ಸತ್ಯಾಂಶ ಬೆಳಕಿಗೆ ಬರಲಿದೆ.

Translate »