ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಎಸ್ಡಿಎಂ-ಐಎಂಡಿ ಸಭಾಂಗಣ ದಲ್ಲಿ ಮಂಗಳವಾರ ಸಂಚಾರ ಪೊಲೀಸ ರಿಗೆ ವೃತ್ತಿ ಕೌಶಲ್ಯ ಕುರಿತಂತೆ ತರಬೇತಿ ಕಾರ್ಯಾಗಾರ ನಡೆಯಿತು. ಮೈಸೂರು ನಗರ ಪೊಲೀಸ್ ವತಿ ಯಿಂದ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಉದ್ಘಾಟಿಸಿದರು. ದುಬೈನ ಸಾಫ್ಟ್ಸ್ಕಿಲ್ ತರಬೇತಿ ಸಂಸ್ಥೆಯ ಸ್ಪೆಷಲ್ ಕನ್ಸಲ್ಟೆಂಟ್ ಆಗಿರುವ ಬೆಂಗಳೂರಿನ ಮಧುಕಿರಣ್ ಅವರು ಸಂಚಾರ ಪೊಲೀಸರಿಗೆ ತರಬೇತಿ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಸಾರ್ವಜನಿಕರು ಹಾಗೂ ವಾಹನ ಬಳಕೆದಾರರಿಗೆ…