ಹಾಸನ: ರಾಜ್ಯದಲ್ಲಿ ಉನ್ನತ ಶಿಕ್ಷಣದವರೆಗೂ ಸಾರ್ವತ್ರಿಕವಾಗಿ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‍ಎಫ್‍ಐ ನೇತೃತ್ವ ದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಘೋಷಣೆ ಗಳನ್ನು ಕೂಗುವ ಮೂಲಕ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿದರು. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡ ಬೇಕೆಂದು ಹಿಂದಿನಿಂದಲೂ ಎಸ್‍ಎಫ್‍ಐ ಸಂಘಟನೆ ಹೋರಾಡುತ್ತಾ ಬಂದಿದೆ. ರಾಜ್ಯ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಎದುರಿಸುತ್ತಿದೆ. ಇದರಿಂದ ಪೋಷಕರು ಶಾಲಾ…