ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ

June 14, 2018

ಹಾಸನ:  ರಾಜ್ಯದಲ್ಲಿ ಉನ್ನತ ಶಿಕ್ಷಣದವರೆಗೂ ಸಾರ್ವತ್ರಿಕವಾಗಿ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‍ಎಫ್‍ಐ ನೇತೃತ್ವ ದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಘೋಷಣೆ ಗಳನ್ನು ಕೂಗುವ ಮೂಲಕ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿದರು. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡ ಬೇಕೆಂದು ಹಿಂದಿನಿಂದಲೂ ಎಸ್‍ಎಫ್‍ಐ ಸಂಘಟನೆ ಹೋರಾಡುತ್ತಾ ಬಂದಿದೆ. ರಾಜ್ಯ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಎದುರಿಸುತ್ತಿದೆ. ಇದರಿಂದ ಪೋಷಕರು ಶಾಲಾ ಕಾಲೇಜುಗಳ ದುಬಾರಿ ಶುಲ್ಕದೊಂದಿಗೆ ಬಸ್‍ಪಾಸ್‍ಗೆ ಹಣ ಭರಿಸುವುದು ಕಷ್ಟಕರ ವಾಗಿದೆ. ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶಿಕ್ಷಣದಿಂದ ವಂಚಿತರಾಗ ಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಸ್‍ಪಾಸ್ ದರ ಇತರೆ ರಾಜ್ಯಕ್ಕಿಂತ ದುಬಾರಿಯಾಗಿದೆ. ಇಂತಹ ವೇಳೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರ ಭರಿಸುವುದು ಆರ್ಥಿಕ ಹೊರೆ ಯಾಗಲಿದೆ. ಅಲ್ಲದೆ ಹಿಂದಿನ ಕಾಂಗ್ರೆಸ್ ಸರ್ಕಾರ ಉನ್ನತ ಶಿಕ್ಷಣ ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವ್ಯವಸ್ಥೆ ಕಲ್ಪಿಸಿತ್ತು. ಆಗ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತ ರಾಗಿದ್ದರು. ಈಗಲೂ ಆ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರಲ್ಲದೆ, ಕೇರಳ, ತಮಿಳು ನಾಡು ಮಾದರಿಯಲ್ಲಿ ವಿದ್ಯಾರ್ಥಿಗಳಿಗೆಲ್ಲಾ ಶೀಘ್ರವಾಗಿ ಉಚಿತ ಬಸ್‍ಪಾಸ್ ನೀಡ ಬೇಕು. ಇಲ್ಲವಾದರೆ ಜೂ.15ರಂದು ಬೆಂಗಳೂರಿನ ಶಾಂತಿ ನಗರದÀ ಕೆಎಸ್ ಆರ್‍ಟಿಸಿ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಫೆಡರೇಷನ್ ಜಿಲ್ಲಾಧ್ಯಕ್ಷ ಸಿ.ಎಸ್.ಮಹೇಶ್, ಉಪಾಧ್ಯಕ್ಷ ರಕ್ಷಿತಾ, ಕಾರ್ಯದರ್ಶಿ ಎಂ.ಆಶಾ, ತಾಲೂಕು ಅಧ್ಯಕ್ಷ ರಮೇಶ್, ಪ್ರೇಮಾ, ಗೌತಮಿ, ಪ್ರಸನ್ನ, ನಾಗೇಂದ್ರ ಇತರರಿದ್ದರು.

Translate »