ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು
ಕೊಡಗು

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು

June 14, 2018
  • 30ಕ್ಕೂ ಹೆಚ್ಚು ಕಡೆ ಬರೆ ಕುಸಿತ
  • ಕೇರಳಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್
  • ಬರೆ ಕುಸಿತಕ್ಕೆ ಕೇರಳ ಕ್ಲೀನರ್ ಬಲಿ
  • ಜಿಲ್ಲಾಡಳಿತದಿಂದ ಪರಿಶೀಲನೆ; ಪರಿಹಾರ ಕಾರ್ಯ ಆರಂಭ

ಮಡಿಕೇರಿ: ಕಳೆದ ಒಂದು ವಾರಗಳಿಂದ ಸುರಿದ ಮಳೆಗೆ ದಕ್ಷಿಣ ಕೊಡಗು ಸಂಪೂರ್ಣ ತತ್ತರಿಸಿ ಹೋಗಿದೆ. ಮಾಕುಟ್ಟ ವಿರಾಜಪೇಟೆ ಮೂಲಕ ಕೇರಳ ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿ ಸಂಚಾರ ದುಸ್ತರ ಗೊಂಡಿದೆ.ಇದರಿಂದಾಗಿ ವಾಹನ ಮತ್ತು ಪ್ರಯಣಿಕರಿಗೆ ಸಮಸ್ಯೆಯಾಗಿ ಪರಿಣಮಿ ಸಿದೆ. ಮಂಗಳವಾರ ರಾತ್ರಿ ಸುರಿದ ಬಾರಿ ಮಳೆಗೆ ಪೆರುಂಬಾಡಿ ಗೇಟಿನಿಂದ ಮಾಕು ಟ್ಟದ ರಸ್ತೆ ಉದ್ದಕ್ಕೂ ಸುಮಾರು 30ಕ್ಕೂ ಹೆಚ್ಚು ಕಡೆಗಳಲ್ಲಿ ಬರೆ ಕುಸಿದು ಸುಮಾರು ನೂರಾರು ಮರಗಳು ನೆಲಕ್ಕುರುಳಿದ್ದು, ಅಪಾರ ನಷ್ಟ ಸಂಭವಿಸಿದೆ. ಮತ್ತಷ್ಟು ಬರೆ ಕುಸಿಯುವ ಹಂತದಲ್ಲಿದ್ದು ಆತಂಕದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಮುಂದಿನ 10 ದಿನಗಳ ಕಾಲ ಸುಗಮ ಸಂಚಾರ ಸಾಧ್ಯವಿಲ್ಲದಂತಾಗಿದೆ.

ಮಳೆಯ ಅಬ್ಬರದಿಂದ ಬರೆ ಕುಸಿದು ಕೇರಳ ಮೂಲದ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಾಕುಟ್ಟ ಹೆದ್ದಾರಿ ಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೇರಳದ ಇರಟಿ ಸಮೀಪದ ಪೆರಾಟೆ ಗ್ರಾಮದ ನಿವಾಸಿ ಶರತ್ (25) ಮೃತಪಟ್ಟ ದುರ್ದೈವಿಯಾಗಿದ್ದಾನೆ. ವಿರಾಜಪೇಟೆಯಲ್ಲಿ ಕಲ್ಲು ಇಳಿಸಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಮಾಕುಟ್ಟ ರಸ್ತೆಯ ತಿರುವು ಒಂದರ ಬಳಿ ಲಾರಿಗೆ ಅಡ್ಡಲಾಗಿ ಮರದ ಕೊಂಬೆ ಮುರಿದು ಬಿದ್ದಿತ್ತು. ರಸ್ತೆಗೆ ಅಡ್ಡ ವಾಗಿ ಬಿದ್ದ ಕೊಂಬೆಯನ್ನು ತೆಗೆಯಲು ಹೋದಾಗ ಬಾರಿ ಬರೆ ಕುಸಿದು ಪಕ್ಕದ ಲ್ಲಿದ್ದ ಮೋರಿಯೊಳಗೆ ಶರತ್ ಮಣ್ಣಿನಡಿ ಯಲ್ಲಿ ಸಿಲುಕಿಕೊಂಡಿದ್ದಾನೆ. ಸಹ ಕಾರ್ಮಿ ಕರು ರಾತ್ರಿ ಪೂರ್ತಿ ಶರತ್‍ಗಾಗಿ ಹುಡು ಕಾಡಿದರು ಆತ ಪತ್ತೆಯಾಗಿರಲಿಲ್ಲ.

ಇಂದು ಮಧ್ಯಾಹ್ನ ಕಾರ್ಮಿಕರು ತೊರೆಯ ಉದ್ದಕ್ಕೂ ಶರತ್‍ಗಾಗಿ ಶೋಧ ನಡೆಸಿ ದಾಗ ಸುಮಾರು 1 ಕಿ.ಮೀ. ದೂರ ಆತನ ದೇಹ ನೀರಿನಲ್ಲಿ ಕೊಚ್ಚಿ ಹೋಗಿರುವುದು ಪತ್ತೆಯಾಗಿದೆ. ಕೇರಳ ಕಾರ್ಮಿಕ ಸಂಘ ಟನೆ ಆತನ ದೇಹವನ್ನು ಹೊರ ತೆಗೆಯು ವಲ್ಲಿ ಯಶಸ್ವಿಯಾಯಿತು. ಬಳಿಕ ಮೃತ ದೇಹವನ್ನು ವಿರಾಜಪೇಟೆ ಆರೋಗ್ಯ ಕೇಂದ್ರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಯಿತು.

ವಿರಾಜಪೇಟೆ ವಿ.ಬಾಡಗ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 12 ಇಂಚು ಮಳೆ ಸುರಿದಿದ್ದು, ಕಾಫಿ ತೋಟ, ಮನೆ, ಕೊಟ್ಟಿಗೆ ದ್ವಂಸಗೊಂಡಿದೆ.ಕೆಲವು ಕೆರೆಗಳ ದಂಡೆ ಒಡೆದು ಲಕ್ಷಾಂತರ ರೂಪಾಯಿ ನಷ್ಟ ಸಂಭ ವಿಸಿದೆ. ವಿ.ಬಾಡಗ ಗ್ರಾಮದ ಗಾಂಡಂ ಗಡ ಸಾಬು ಪೊನ್ನಪ್ಪ ಎಂಬವರ ಲೈನ್ ಮನೆ ಸಂಪೂರ್ಣ ಕುಸಿದು ಬಿದ್ದು, 70 ಚೀಲ ಗೊಬ್ಬರ ಪಂಪ್‍ಸೆಟ್, ಪೈಪುಗಳು ಮಣ್ಣಿನಡಿ ಮುಚ್ಚಿಹೋಗಿದೆ.ಮಾತ್ರವಲ್ಲದೆ ಕಾಫಿ ತೋಟದಲ್ಲಿ ಭೂ ಕುಸಿತ ಸಂಭವಿ ಸಿದ ಪರಿಣಾಮ ಅಂದಾಜು 2 ಏಕರೆ ಕಾಫಿ ತೋಟ ದ್ವಂಸಗೊಂಡಿದೆ.

ನಂಬುಡುಮಾಡ ಸುಭ್ರಮಣ , ಕೋದೆಂಗಡ ದೊರೆಯಪ್ಪ,ಮಳುವಂಡ ಅಪ್ಪಚ್ಚು ಅವರ ಕಾಫಿ ತೋಟಗಳಿಗೆ ಹಾನಿ ಸಂಭವಿಸಿದ್ದು, ಕನ್ನಿಕಂಡ ಚರ್ಮಣ್ಣ ಅವರ ಮನೆ ಗೋಡೆಗೆ ಬರೆ ಕುಸಿದು ಗೋಡೆ ಜಖಂ ಗೊಂಡಿದೆ.ಉಪ್ಪಂಡ ಬಿದ್ದಯ್ಯ ಎಂಬವರ ಮನೆಗೆ ತೆರಳುವ ಸಂಪರ್ಕ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿದೆ.ಒಟ್ಟಿನಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಮಳೆಯ ಆರ್ಭಟಕ್ಕೆ ಜನತೆ ತತ್ತರಿಸಿ ಹೋಗಿದ್ದು ಈಗಾಗಲೇ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜಿಲ್ಲಾಧಿಕಾರಿ ಶ್ರೀವಿಧ್ಯಾ, ಜಿಲ್ಲಾ ಉಪ ವಿಭಾಗಾಧಿಕಾರಿ ರಮೇಶ್. ಜಿ ಕೋನ ರೆಡ್ಡಿ, ತಹಶೀಲ್ದಾರ್ ಗೋಂವಿಂದ್‍ರಾಜು, ಲೋಕೋಪಯೋಗಿ ಇಲಾಖೆ ಅಭಿ ಯಂತರ ವಿನಯ್ ಕುಮಾರ್, ತಾಲೂಕು ಅಭಿಯಂತರ ಪ್ರಭು, ಜಿಲ್ಲಾ ಪಂಚಾ ಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾಲೂಕು ಬಿಜೆಪಿ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಜೋಕಿಂ, ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಪೃಥ್ಯುರಾಜ್ ಮತ್ತು ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿ ಕಾರಿಗಳು ಮಳೆಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

Translate »