ಅತಿಥಿ ಉಪನ್ಯಾಸಕ: ಅರ್ಜಿ ಆಹ್ವಾನ
ಮೈಸೂರು

ಅತಿಥಿ ಉಪನ್ಯಾಸಕ: ಅರ್ಜಿ ಆಹ್ವಾನ

June 14, 2018

ಮೈಸೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಮೈಸೂರು ತಾಲ್ಲೂಕಿನ ದೊಡ್ಡಕಾನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿಗೆ (ಆಂಗ್ಲ ಮಾಧ್ಯಮ), 2018-19ನೇ ಸಾಲಿನ ಪ್ರಥಮ (Science & Commerce) ಮತ್ತು ದ್ವಿತೀಯ (Science & Commerce) ಪಿಯುಸಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಅಕೌಂಟೆನ್ಸಿ ವಿಷಯ ಬೋಧಿಸಲು ಅರ್ಹ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, # 446, ಎಸ್‍ಕೆಎರ್ ವಿದ್ಯಾಸಂಸ್ಥೆ, ಸರಸ್ವತಿ ನಿಲಯ, ಕೆಂಪನಂಜಾಂಭ ಅಗ್ರಹಾರ, ಕೆ.ಆರ್. ಮೊಹಲ್ಲಾ, ಮೈಸೂರು-570024 ಇಲ್ಲಿಗೆ ಸ್ವವಿವರವುಳ್ಳ ಅರ್ಜಿಯನ್ನು ಜೂ.18 ಸಂಜೆ 5 ಗಂಟೆಯೊಳ ಗಾಗಿ ಸಲ್ಲಿಸುವುದು. ಮಾಹಿತಿಗೆ ದೂ ಸಂಖ್ಯೆ: 0821-2422088 ಸಂಪರ್ಕಿಸಬಹುದು.

Translate »