ಅಗತಗೌಡನಹಳ್ಳಿ ರಸ್ತೆಯ ದುರವಸ್ಥೆ
ಚಾಮರಾಜನಗರ

ಅಗತಗೌಡನಹಳ್ಳಿ ರಸ್ತೆಯ ದುರವಸ್ಥೆ

June 14, 2018

ಬೇಗೂರು:  ಸಮೀಪದ ಅಗತಗೌಡನಹಳ್ಳಿ-ಹೆಗ್ಗಡ ಹಳ್ಳಿ- ಹಕ್ಕಲಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಕಬ್ಬಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ 766 ರಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಗುಂಡ್ಲುಪೇಟೆ, ನಂಜನಗೂಡು, ಹಾಗೂ ಮೈಸೂರು ನಗರ ಪ್ರದೇಶಗಳಿಗೆ ತೆರಳುವ ಸಾವಿರಾರು ಸಂಖ್ಯೆ ಪ್ರಯಾಣಿಕರಿಗೆ ಈ ರಸ್ತೆಯೇ ಪ್ರಮುಖ ಮಾರ್ಗವಾಗಿದೆ. ಆದರೆ ಈ ರಸ್ತೆ ಹಳ್ಳಗುಂಡಿಗಳು ಬಿದ್ದಿದ್ದು, ಇದನ್ನು ಸರಿಪಡಿಸುವ ಗೋಜಿಗೆ ಯಾವ ಅಧಿಕಾರಿ ಗಳಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಹಾಗೂ ಶಾಸಕರಿಗೆ ಈ ರಸ್ತೆ ನಿರ್ಮಾಣ ಮಾಡಬೇಕೆಂಬ ಮನಸ್ಸು ಇಲ್ಲದಂತಾಗಿದೆ.

ಈ ರಸ್ತೆಯ ಪ್ರಯಾಣ ಸಾವಿನ ಜೊತೆ ಸರಸವಾಡಿದಂತೆಯೇ ಭಾಸವಾಗುತ್ತದೆ, ವಾಹನ ಸಂಚಾರವಿರಲಿ ಪಾದಚಾರಿಗಳು ನಡೆದಾಡಲೂ ಪರದಾಡುವಂತಿರುವ ಈ ರಸ್ತೆಯಲ್ಲಿರುವ ಹಳ್ಳಗಳನ್ನು ತಪ್ಪಿಸಿ ಚಲಿ ಸಲು ವಾಹನ ಸವಾರರು ಸರ್ಕಸ್ ಮಾಡುವ ಪರಿಸ್ಥಿತಿ ಇದೆ. ಗುಂಡಿ ತಪ್ಪಿ ಸಲು ಹೋಗಿ ನಿಯಂತ್ರಣ ತಪ್ಪಿ ಅದೆಷ್ಟೋ ಮಂದಿ ಬಿದ್ದು ಕೈ-ಕಾಲು ಮುರಿದು ಕೊಂಡಿದ್ದಾರೆ. ಇನ್ನಾದರೂ ಈ ರಸ್ತೆ ಯನ್ನು ನಿರ್ಮಾಣ ಮಾಡಬೇಕು. ಇಲ್ಲ ದಿದ್ದರೆ ಮುಂದೆ ಎದುರಾಗುವ ಅನಾಹು ತಗಳಿಗೆ ಇಲಾಖೆಯ ಅಧಿಕಾರಿಗಳನ್ನೆ ಹೊಣೆ ಮಾಡ ಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

Translate »