ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ
ಚಾಮರಾಜನಗರ

ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ

June 14, 2018

ಗುಂಡ್ಲುಪೇಟೆ: ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಪಟ್ಟಣದ ಜನತೆಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಜಗದೀಶ್ ಹೇಳಿದರು.

ಪಟ್ಟಣದಲ್ಲಿ ಹಿಂದಿನಿಂದಲೂ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬಂದಿರು ವುದು ಉತ್ತಮವಾದ ಬೆಳವಣಿಗೆಯಾಗಿದ್ದು, ರಂಜಾನ್ ಹಬ್ಬದಂದು ಪಟ್ಟಣದಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡುವುದು ಸುಲಭ. ಈ ನಿಟ್ಟಿನಲ್ಲಿ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಹಬ್ಬವನ್ನು ಹಬ್ಬವಾಗಿ ಆಚರಿಸಬೇಕು. ಇದಕ್ಕೆ ಪೆÇಲೀಸ್ ಇಲಾ ಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಸಬ್ ಇನ್ಸ್‍ಪೆಕ್ಟರ್ ಶಿವರುದ್ರ, ಪುರಸಭೆ ಸದಸ್ಯ ನೂರುಲ್ಲಾ, ಮುಖಂಡರಾದ ಮನ್ಸೂರ್, ಮಲಿಕ್, ಇಕ್ಬಾಲ್ ಸೇರಿದಂತೆ ಸಮುದಾಯದ ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Translate »