ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪ್ರತಿಭಟನೆ
ಚಾಮರಾಜನಗರ

ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪ್ರತಿಭಟನೆ

June 14, 2018

ಚಾಮರಾಜನಗರ: ಶಾಸಕ ಸತೀಶ್‍ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮಾನವ ಬಂಧುತ್ವ ವೇದಿಕೆ, ಪಾಳೇಗಾರ ಮಾರನಾಯಕ ಯುವ ಬ್ರಿಗೇಡ್, ಪ್ರಬುದ್ಧ ಭಾರತ ನಿರ್ಮಾಣ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿ ಯಿಂದ ನಗರದಲ್ಲಿ ಬುಧವಾರ ಪ್ರತಿ ಭಟನೆ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಳ್ಳಿ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‍ನಾಯಕ, ಪ್ರಬುದ್ಧ ಭಾರತ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಮಹದೇವನಾಯಕ ಅವರ ನೇತೃತ್ವ ದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾ ರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ಸಮ್ಮಿಶ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಳ್ಳಿ ಮಾತನಾಡಿ, ಕಾಂಗ್ರೆಸ್, ಜಾ.ದಳ ಸಮ್ಮಿಶ್ರ ಸರ್ಕಾರದಲ್ಲಿ ವೈಚಾರಿಕ ಪ್ರಜ್ಞೆಯುಳ್ಳ, ಜನಪರ ಕಾಳಜಿ ಹೊಂದಿ ರುವ ಹಾಗೂ ಬುದ್ಧ, ಬಸವ, ಅಂಬೇ ಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡಿರುವ ಶಾಸಕ ಸತೀಶ್‍ಜಾರಕಿ ಹೊಳಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಯಾಗಿದೆ ಎಂದು ಕಿಡಿಕಾರಿದರು.

ಸತೀಶ್‍ಜಾರಕಿಹೊಳಿ ಅವರು ಸಮಾಜ ಮೌಢ್ಯದ ವಿರುದ್ಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತೊಡಗಿದ್ದು, ನಿಷ್ಷಕ್ಷಪಾತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡು ಶೋಷಣೆಗೊಳಗಾದ ಸಮುದಾಯಗಳಾದ ಎಸ್‍ಸಿ, ಎಸ್‍ಟಿ ಹಾಗೂ ಹಿಂದುಳಿದ ವರ್ಗ ಗಳು, ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶ್ರೇಯೋ ಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ವರಿಗೆ ಸಮಾಜದಲ್ಲಿ ಹೆಚ್ಚಿನ ಸೇವೆ ಮಾಡಲು ಕಾಂಗ್ರೆಸ್, ಜಾ.ದಳ ಸಮ್ಮಿಶ್ರ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡ ಬೇಕು ಎಂದು ಆಗ್ರಹಿಸಿದರು.

ಸತೀಶ್‍ಜಾರಕಿಹೊಳಿ ಅಭಿಮಾನಿ ಬಳ ಗದ ಮುಖಂಡ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‍ನಾಯಕ ಮಾತನಾಡಿ, ಶಾಸಕ ಸತೀಶ್‍ಜಾರಕಿ ಹೊಳಿ ಅವರು ದಲಿತರ ಪರವಾಗಿ ಕೆಲಸ ಮಾಡುತ್ತಾರೆ ಎಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅವರನ್ನು ಕಡೆ ಗಣಿಸಲಾಗಿದೆ ಎಂದು ದೂರಿದರು.

ಕಾಂಗ್ರೆಸ್, ಜಾದಳ ಸಮ್ಮಿಶ್ರ ಸರ್ಕಾರ ದಲ್ಲಿ 9 ಮಂದಿ ನಾಯಕ ಸಮುದಾಯದ ಶಾಸಕರು ಇದ್ದಾರೆ. ಅದರಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ನಿಂದ ಇಬ್ಬರು ಶಾಸಕರು ಹಾಗೂ ಜಾ.ದಳ ದಿಂದ ಒಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ವರಿಷ್ಟರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ಒತ್ತಾಯಿಸಿದರು. ಇಲ್ಲ ದಿದ್ದರೆ ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷ ಗಳಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪ್ರಬುದ್ಧ ಭಾರತ ನಿರ್ಮಾಣ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ಮಹದೇವನಾಯಕ, ಪಾಳೇಗಾರ ಮಾರನಾಯಕ ವಿದ್ಯಾರ್ಥಿ ಘಟಕ ರಾಜ್ಯಾ ಧ್ಯಕ್ಷ ರಾಜೇಶನಾಯಕ, ಪ್ರಧಾನ ಕಾರ್ಯ ದರ್ಶಿ ಬದನಗುಪ್ಪೆನಾರಾಯಣ, ಸಂಘಟನಾ ಕಾರ್ಯದರ್ಶಿ ದೀಪಕ್‍ನಾಯಕ, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ರಂಗಸ್ವಾಮಿ, ರಾಮಸ್ವಾಮಿ, ಮನಸ್, ಗಂಗಾಧರಸ್ವಾಮಿ, ಕೃಷ್ಣ, ಪುಟ್ಟಸ್ವಾಮಿ, ಯರ ಗಂಬಳ್ಳಿಸಿದ್ದು, ರವಿ, ಮಾನವ ಬಂಧುತ್ವ ವೇದಿಕೆಯ ವೃಷಬೇಂದ್ರಹಂಗಳ, ಗುಂಡ್ಲು ಪೇಟೆ ತಾಲೂಕು ಸಂಚಾಲಕ ಆರ್.ಸೋಮಣ್ಣ, ಮಹಿಳಾ ಜಿಲ್ಲಾ ಸಂಚಾಲಕಿ ಸುಶೀಲರಾಮ ಸಮುದ್ರ, ಜಲೇಂದ್ರ, ರಾಮೇಗೌಡ, ಗೋಪಾಲ್‍ಕಬ್ಬಳ್ಳಿ, ಕುಮಾರ್, ವೃಷಭೇಂದ್ರ ಇತರರು ಭಾಗವಹಿಸಿದ್ದರು.

Translate »