ಗುಂಡ್ಲುಪೇಟೆ ವಿವಿಧೆಡೆ ಹಾಡಹಗಲೇ ಚಿರತೆ ಹಾವಳಿ
ಚಾಮರಾಜನಗರ

ಗುಂಡ್ಲುಪೇಟೆ ವಿವಿಧೆಡೆ ಹಾಡಹಗಲೇ ಚಿರತೆ ಹಾವಳಿ

June 14, 2018

ಗುಂಡ್ಲುಪೇಟೆ:  ತಾಲೂಕಿನ ವಿವಿಧೆಡೆ ಹಾಡಹಗಲೇ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.
ತಾಲೂಕಿನ ಕೊಡಸೋಗೆ ಗ್ರಾಮದ ಮದ್ದಾನಪ್ಪ ಎಂಬುವರ ಜಮೀ ನಿನ ಬಳಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಜಮೀ ನಿನಲ್ಲಿದ್ದ ಮಾಲೀಕರ ಮಗ ಸ್ವಾಮಿ ಎಂಬುವರು ಚಿರತೆಯನ್ನು ನೋಡಿ ಸಮೀಪದ ಮರದ ಮರೆಯಲ್ಲಿ ಅಡಗಿಕೊಂಡಿದ್ದಾರೆ.

ನಂತರ ಚಿರತೆಯು ರಸ್ತೆಯಲ್ಲಿ ವಾಹನಗಳ ಶಬ್ದ ಕೇಳಿ ಪೆÇದೆಗಳತ್ತ ನುಸುಳಿದೆ. ಇತ್ತೀಚೆಗೆ ಚಿರತೆಯ ಹಾವಳಿಯಿಂದ ಹೊಸಬಡಾವಣೆಯ ಹಲವು ನಾಯಿಗಳು ಕಣ್ಮರೆಯಾಗುತ್ತಿವೆ. ಕೆಲವು ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

ಹಾಡಹಗಲೇ ಚಿರತೆಯು ಗ್ರಾಮದ ಸಮೀಪದಲ್ಲಿ ಸುಳಿ ದಾಡುತ್ತಿರುವುದರಿಂದ ರೈತರು ಒಬ್ಬಂಟಿಯಾಗಿ ತಮ್ಮ ಜಮೀ ನಿನತ್ತ ತೆರಳಲು ಭಯಪಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಚಿರತೆಯ ಸೆರೆಗೆ ಬೋನು ಅಳವಡಿಸುವಂತೆ ಒತ್ತಾಯಿಸಿದ್ದಾರೆ.ಇದಲ್ಲದೇ ತಾಲೂಕಿನ ತೆರಕಣಾಂಬಿ ಹೊರವಲಯದ ಗುಂಡ್ಲುಪೇಟೆ ರಸ್ತೆಯಲ್ಲಿ ಚಿರತೆಯೊಂದು ರಸ್ತೆ ದಾಟು ತ್ತಿದ್ದುದನ್ನು ಕಂಡ ವಾಹನ ಸವಾರರು ಭೀತಿಗೊಳಗಾಗಿದ್ದಾರೆ.

ರಾಘವಾಪುರ ಗ್ರಾಮ ಪಂಚಾ ಯಿತಿ ಸದಸ್ಯ ದೇವಯ್ಯ ಹಾಗೂ ಸಂಗಡಿಗರು ಜೂನ್ 12ರ ಸಂಜೆ ತಮ್ಮ ಬೈಕಿನಲ್ಲಿ ಪಟ್ಟಣದತ್ತ ಹೋಗು ವಾಗ ಗ್ರಾಮದ ಜೆಎಸ್‍ಎಸ್ ಪ್ರೌಢ ಶಾಲೆಯ ಸಮೀಪ ಭಾರೀ ಗಾತ್ರದ ಚಿರತೆಯೊಂದು ನಿಧಾನಕ್ಕೆ ರಸ್ತೆ ದಾಟುತ್ತಿದ್ದುದನ್ನು ಕಂಡಿದ್ದಾರೆ. ಕೂಡಲೇ ಬೈಕ್ ನಿಲ್ಲಿಸಿ ಗ್ರಾಮದತ್ತ ಹಿಂದಿರುಗಿದ್ದಾರೆ.

ಈ ಪ್ರದೇಶದಲ್ಲಿ ಗ್ರಾಮದ ಕೋಳಿ ಹಾಗೂ ಮಾಂಸದ ಅಂಗಡಿಗಳವರು ನಿರುಪಯುಕ್ತ ತ್ಯಾಜ್ಯಗಳನ್ನು ಬಿಸಾಡು ತ್ತಿದ್ದಾರೆ. ಇವುಗಳನ್ನು ತಿನ್ನಲು ಬೀದಿ ನಾಯಿಗಳು ಹಿಂಡಾಗಿ ಬರುತ್ತಿದ್ದು, ನಾಯಿಗಳನ್ನು ಬೇಟೆಯಾಡಲು ಚಿರತೆಯು ಬರುತ್ತಿದೆ. ಅಕಸ್ಮಾತ್ ಶಾಲೆಗೆ ಹೋಗುವ ಮಕ್ಕಳು, ಸಂಜೆ ವಾಯುವಿಹಾರಕ್ಕೆ ಬರುವ ಮಹಿಳೆಯರು ಇಲ್ಲವೆ ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದರೆ ಅನಾ ಹುತವುಂಟಾಗಲಿದೆ.

ಆದ್ದರಿಂದ ಗ್ರಾಮ ಪಂಚಾುಯಿಯವರು ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿಯದಂತೆ ಎಚ್ಚರಿಕೆ ನೀಡಬೇಕು ಹಾಗೂ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »