ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ
ಚಾಮರಾಜನಗರ

ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ

June 14, 2018

ಹನೂರು:  ಹನೂರು ತಾಲೂಕಿನ ಪ್ರಸಿದ್ಧ ಪುಣ್ಯಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆಮಹ ದೇಶ್ವರಸ್ವಾಮಿ ದೇಗುಲದಲ್ಲಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗಿನ ಜಾವ 3 ಗಂಟೆಯಿಂದಲೇ ಶ್ರೀ ಸ್ವಾಮಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಹ ಮಾದಪ್ಪನ ದರುಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆಯಲು ಜಮಾಯಿಸಿದ್ದರು.

ಮಂಗಳವಾರ ರಾತ್ರಿ ನಡೆದ ಎಣ್ಣೆ ಮಜ್ಜನ ಸೇವೆಗೆ ಸೋಮವಾರದಿಂದಲೇ ರಾಜ್ಯದ ನಾನಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಸನ್ನಿಧಿಗೆ ಆಗಮಿಸಿದ್ದರು. ಚಿನ್ನದ ರಥೋತ್ಸವ, ಹುಲಿ ವಾಹನೋತ್ಸವ, ಬಸವ ವಾಹ ನೋತ್ಸವ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ವಿವಿಧ ಉತ್ಸವಗಳು ನೆರ ವೇರಿದವು. ಅಪಾರ ಭಕ್ತರು ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿ ದೇವಸ್ಥಾನದ ಮುಂಭಾಗ ಧೂಪಹಾಕಿ ಉಘೇ ಮಾದಪ್ಪ ಎಂದು ಘೋಷಣೆ ಕೂಗಿದರು.

ಕೊಳ್ಳೇಗಾಲ ಕೆಎಸ್‍ಆರ್‍ಟಿಸಿ ಬಸ್ ಡಿಪೋ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಸಾರಿಗೆ ಬಸ್‍ಗಳು ಮೂರು ದಿನಗಳ ಕಾಲ ವಿಶೇಷ ಬಸ್‍ಗಳ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ ಮತ್ತು ತಮಿಳುನಾಡು ಭಾಗದಿಂದ ವಿವಿಧ ಜಿಲ್ಲೆ ಗಳ ಮಾದಪ್ಪನ ಭಕ್ತರು ಸೇವೆ ಸಲ್ಲಿಸಿ ದರು. ಇದಲ್ಲದೆ ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದಲೂ ಮಾದ ಪ್ಪನಬೆಟ್ಟ, ನಾಗಮಲೆಗೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

Translate »