ಮಂಗಳವಾರ ಪಿರಿಯಾಪಟ್ಟಣದಲ್ಲಿ 63 ಮಿಮೀ ಮಳೆ
ಮೈಸೂರು

ಮಂಗಳವಾರ ಪಿರಿಯಾಪಟ್ಟಣದಲ್ಲಿ 63 ಮಿಮೀ ಮಳೆ

June 14, 2018

ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಮಂಗಳವಾರ 63 ಮಿಮೀ ಮಳೆಯಾಗಿದೆ.
ಹೆಚ್.ಡಿ.ಕೋಟೆ 12.8, ಮೈಸೂರು 0.25 ಮಿಮೀ ಮಳೆಯಾಗಿದ್ದು, ಕೆ.ಆರ್.ನಗರದಲ್ಲಿ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಅಂತೆಯೇ ನಂಜನಗೂಡು, ಹುಣಸೂರು, ತಿ.ನರಸೀಪುರ ತಾಲೂಕಿನಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಂಟ್ರೋಲ್ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕೆಆರ್‍ಎಸ್ ಅಣೆಕಟ್ಟಿನಲ್ಲಿ 88.6 ಅಡಿ ನೀರಿದ್ದು, 22,871 ಕ್ಯೂಸೆಕ್ ಒಳ ಹರಿವಿದೆ. 380 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2273.05 ಅಡಿ ನೀರಿದ್ದು, 23,971 ಕ್ಯೂಸೆಕ್ ಒಳ ಹರಿವಿದೆ. 100 ಕ್ಯೂಸೆಕ್ ಹೊರ ಹರಿವಿದೆ. ಹಾರಂಗಿ ಜಲಾಶಯದಲ್ಲಿ 2,817.76 ಅಡಿ ನೀರಿದ್ದು, 2,683 ಕ್ಯೂಸೆಕ್ ಒಳ ಹರಿವಿದೆ. 30 ಕ್ಯೂಸೆಕ್ ಹೊರ ಹರಿವಿದೆ. ನುಗು ಜಲಾಶಯದಲ್ಲಿ 74.02 ಅಡಿ ನೀರಿದ್ದು, 1,301 ಕ್ಯೂಸೆಕ್ ಒಳ ಹರಿವಿದೆ. ತಾರಕ ಜಲಾಶಯದಲ್ಲಿ 24.04 ಅಡಿ ನೀರಿದ್ದು, 2,505 ಕ್ಯೂಸೆಕ್ ಒಳÀ ಹರಿವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »