ಅರ್ಥಪೂರ್ಣ ಯೋಗ ದಿನಾಚರಣೆಗೆ ಎಡಿಸಿ ಸೂಚನೆ
ಹಾಸನ

ಅರ್ಥಪೂರ್ಣ ಯೋಗ ದಿನಾಚರಣೆಗೆ ಎಡಿಸಿ ಸೂಚನೆ

June 14, 2018

ಹಾಸನ: ವಿಶ್ವ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಯೋಜಿಸುವಂತೆ ಎಡಿಸಿ ಬಿ.ಆರ್.ಪೂಣ ್ಮಾ ಆಯುಷ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜೂ.21ರ ಯೋಗ ದಿನದಂದು ಯೋಗ ಪ್ರದರ್ಶನವನ್ನು ಜಿಲ್ಲಾ ಕ್ರೀಡಾಂಗಣ ಹಾಗೂ ಮಲೆ ನಾಡು ತಾಂತ್ರಿಕ ವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಆಯೋ ಜಿಸುವಂತೆ ನಿರ್ದೇಶನ ನೀಡಿದರು. ವಿಶ್ವ ಯೋಗ ದಿನವನ್ನು ಉತ್ತಮವಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದೆ. ಇದಕ್ಕೆ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಾಧ್ಯವಾದ ಮಟ್ಟದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಬೇಕು ಎಂದರು.

ಯೋಗ ತರಬೇತುದಾರರಿಗೆ ಮುಂಚಿತವಾಗಿ ನಿಯಮಾನು ಸಾರ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ. ಪತಂಜಲಿ ಯೋಗ ತರಬೇತಿ ಸಂಸ್ಥೆ ಹಾಗೂ ಇತರೆ ಯೋಗಾಸಕ್ತರ ಸಹಕಾರ ಪಡೆಯುವಂತೆ ತಿಳಿಸಿದ ಅವರು, ಯೋಗ ದಿನಾಚರಣೆಗೆ ಮುನ್ನ ದಿನ ಜೂ.20ರಂದು ಯೋಗಥಾನ್ ಓಟ ಆಯೋಜಿಸುವಂತೆ ಸೂಚಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಜಿಲ್ಲೆಯಾದ್ಯಂತ ಉತ್ತಮವಾಗಿ ಯೋಗ ತರಬೇತಿ ಹಮ್ಮಿ ಕೊಳ್ಳುವಂತೆ ಆಳ್ವಾಸ್ ಕಾಲೇಜು ನ್ಯಾಚುರೋಪತಿ ಸಂಸ್ಥೆಗೆ ಸಲಹೆ ನೀಡಿದ ಅವರು, ವಿವಿಧ ಸಂಸ್ಥೆಗಳು ಹಾಗೂ ಕಾರ್ಖಾನೆಗಳ ಸಹಯೋಗವನ್ನು ಈ ಕಾರ್ಯಕ್ರಮಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಪುಷ್ಪಾ ಹಾಗೂ ಲಕ್ಷ್ಮೀಕಾಂತ್ ಅವರು ಯೋಗ ದಿನಾಚರಣೆ ಪೂರ್ವ ಸಿದ್ಧತೆಗಳ ಅವಶ್ಯಕತೆಗಳ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಕೋರಿದರು. ಪತಂಜಲಿ ಯೋಗ ಸಂಸ್ಥೆ ಮುಖ್ಯಸ್ಥರಾದ ಶ್ರೀಧರ್ ಹಾಗೂ ಶೇಷಪ್ಪ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Translate »