ಬೆಂಗಳೂರು: ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ. ಪಕ್ಷದ ಸಿಸ್ಟಂ ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್‍ನ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡೇ ಶಿಸ್ತನ್ನು ಉಲ್ಲಂಘನೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಯಾರೇ ಆಗಲೀ ಒತ್ತಡ ಹೇರುವ ಮೂಲಕ ಬ್ಲಾಕ್ ಮೇಲ್ ತಂತ್ರ ಉಪಯೋಗಿಸಿದರೆ ಅದಕ್ಕೆ ಪಕ್ಷ ಎಂದಿಗೂ ಮಣಿಯುವುದಿಲ್ಲ ಎಂದರು. ಬಿಜೆಪಿಯವರು ಅತ್ಯಂತ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಯಡಿಯೂರಪ್ಪನವರು ಹಣದ ಆಮಿಷ…