ಬೆಂಗಳೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಭೂಮಿಯನ್ನು ಮೂರು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ವಿಶ್ವ ವಿಖ್ಯಾತ ದಸರಾ ನಾಡಹಬ್ಬ ವೀಕ್ಷಣೆಗೆ ಪತ್ನಿ ಸಮೇತ ಆಗಮಿಸಿದ ಕೇಂದ್ರ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆ ಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಭರವಸೆ ನೀಡಿದ್ದಾರೆ. ಪ್ರಭು ಸಲಹೆಯಂತೆ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅಗತ್ಯ…