ಚಾಮರಾಜನಗರ: ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.29ರಂದು ಗಡಿ ಗ್ರಾಮವಾದ ಅರಕಲವಾಡಿಯಲ್ಲಿ ನಡೆ ಯಲಿದ್ದು, ಮಧುರೈ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ಮಹೇಶ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಎನ್. ಮಹೇಶ್ ಅವರು ತಾಲೂಕಿನ ಮಲೆ ಯೂರು ಗ್ರಾಮದವರು. ನಗರದ ಜೆಎಸ್‍ಎಸ್ ಕಾಲೇಜು ಪದವೀಧರರಾಗಿದ್ದು, ತರಾಸು ಕೃತಿಗಳ ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್‍ಡಿ ಪದವಿ…