ಇಂದು ಅರಕಲವಾಡಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
ಚಾಮರಾಜನಗರ

ಇಂದು ಅರಕಲವಾಡಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ

June 29, 2018

ಚಾಮರಾಜನಗರ: ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.29ರಂದು ಗಡಿ ಗ್ರಾಮವಾದ ಅರಕಲವಾಡಿಯಲ್ಲಿ ನಡೆ ಯಲಿದ್ದು, ಮಧುರೈ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ಮಹೇಶ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಎನ್. ಮಹೇಶ್ ಅವರು ತಾಲೂಕಿನ ಮಲೆ ಯೂರು ಗ್ರಾಮದವರು. ನಗರದ ಜೆಎಸ್‍ಎಸ್ ಕಾಲೇಜು ಪದವೀಧರರಾಗಿದ್ದು, ತರಾಸು ಕೃತಿಗಳ ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್‍ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಮಧುರೈ ಕಾಮ ರಾಜ ವಿವಿಯ ಕನ್ನಡ ವಿಭಾಗದ ಮುಖ್ಯ ಸ್ಥರಾಗಿದ್ದಾರೆ ಎಂದರು.

ಅರಕಲವಾಡಿಯ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಜೂ. 29ರಂದು ಸಮ್ಮೇ ಳನ ನಡೆಯಲಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿ ಕೆಗೆ ಕರೆತರಲಾಗುವುದು. ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ವಿನಯ್ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ವಿದ್ವಾಂಸ ಪ್ರೊ. ಮಲೆಯೂರು ಗುರು ಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದು, ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿ ಸಲಿದ್ದಾರೆ. ಸಂಸದ ಆರ್. ಧ್ರುವನಾರಾ ಯಣ ಉಪಸ್ಥಿತರಿರುತ್ತಾರೆ. ಡಾ. ಎಂ.ಎನ್. ಮಹೇಶ್ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ ಎಂದರು. ಅಂದು ಮಧ್ಯಾಹ್ನ 12.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ಕನ್ನಡ ಸಂಸ್ಕøತಿಗೆ ಹರದನಹಳ್ಳಿಯ ಗೋಸಲ ಪರಂಪರೆಯ ಕೊಡುಗೆ ಎಂಬ ವಿಷಯವಾಗಿ ಪ್ರಾಂಶುಪಾಲ ಮಹೇಶ್ ಹರವೆ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ಗೋಷ್ಠಿಯ ಅಧ್ಯ ಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

Translate »