ಮೈಸೂರು: ಮುಂಬೈ ಮತ್ತು ತಿರುವನಂತಪುರಂ ಮೂಲದ ತುಂಬಿ ಎವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಜನಪ್ರಿಯ ಹೆಲಿಟ್ಯಾಕ್ಸಿ ಸೇವೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದಿಂದ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರಿಗೆ ವಿಸ್ತರಿಸಲು ಉದ್ದೇಶಿಸಿದೆ. ಸಂಸ್ಥೆಯು ಈಗಾಗಲೇ ತನ್ನ ಹೆಲಿಟ್ಯಾಕ್ಸಿ ಸೇವೆಯನ್ನು ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಗಮನದಲ್ಲಿಟ್ಟುಕೊಂಡು ಕೆಐಎಎಲ್‍ನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಆರಂಭಿಸಿದೆ. ಈ ಸೇವೆಯನ್ನು ವಿವಿಧ ಕಂಪನಿಗಳು ತನ್ನ ಸಿಇಓಗಳು ಮತ್ತು ವಿದೇಶಿ ಸಂದರ್ಶಕರು ಗಂಟೆಗಟ್ಟಲೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಸಮಯ…