ಮೈಸೂರು: ಮೈಸೂ ರಿನ ಫೌಂಟೇನ್ ವೃತ್ತದಿಂದ ಕೊಲಂ ಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಳೆ ಟೋಲ್ ಗೇಟ್ ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಟಿಪ್ಪು ವೃತ್ತದ ಬಳಿ ರಸ್ತೆ ವಿಭಜಕ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಅರ್ಧಕ್ಕೆ ಮೊಟಕು ಗೊಳಿಸಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಿಂಗ್‍ರಸ್ತೆಯ ಜಂಕ್ಷನ್ ನಿಂದ ಮೈಸೂರು ನಗರದ ಹಳೆ ಟೋಲ್ ಗೇಟ್‍ವರೆಗೆ ಈಗಾಗಲೇ 10 ಪಥವುಳ್ಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಹಳೆಯ ಟೋಲ್‍ಗೇಟ್‍ನಿಂದ ಫೌಂಟೇನ್ ವೃತ್ತದ ವರೆಗೆ (2…