ಮೈಸೂರು: ತರಕಾರಿ ಬೆಲೆ ದಿಢೀರ್ ಕುಸಿತ ವಾದ ಹಿನ್ನೆಲೆಯಲ್ಲಿ ಭಾನುವಾರ ರೈತರು ಬಂಡಿಪಾಳ್ಯದಲ್ಲಿರುವ ಎಪಿಎಂಸಿಯ ಉಪಕಚೇರಿಯ ಬಳಿ ರೈತರು ನೆಲಕ್ಕೆ ತರಕಾರಿ ಸುರಿದು ಪ್ರತಿಭಟನೆ ನಡೆಸಿದರು. ಮೈಸೂರು ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಭಾನುವಾರ ತಾವು ಬೆಳೆದಿದ್ದ ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದ ನೂರಾರು ರೈತರು ಬೆಲೆ ಕುಸಿತದಿಂದ ಕಂಗೆಟ್ಟು ಪ್ರತಿಭಟನೆ ನಡೆಸಿದರು. ಕಳೆದ ಮೂರು ದಿನದ ಹಿಂದೆ ಇದ್ದ ಬೆಲೆಗೂ ಇಂದು ನಿಗದಿಯಾದ ಬೆಲೆಗೂ ಶೇ.50ರಿಂದ 60ರಷ್ಟು ಕಡಿಮೆಯಾಗಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು….