ವಿರಾಜಪೇಟೆ: ಕೊಡಗು ದಂತ ಕಾಲೇಜಿನಲ್ಲಿ ದಂತ ಆರೋಗ್ಯ ಕ್ಷೇತ್ರದ 9 ವಿಭಾಗಗಳಲ್ಲಿಯು ಸ್ನಾತಕೋತ್ತರ ತರ ಬೇತಿ ಲಭ್ಯವಿದ್ದು, ಈಗಾಗಲೇ ಸಂಸ್ಥೆಯು ತಜ್ಞ ದಂತ ವೈದ್ಯರುಗಳನ್ನು, ಉಪನ್ಯಾಸ ಕರುಗಳನ್ನು ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡು ಗೆಯಾಗಿ ನೀಡಿದೆ. ದಂತ ವೈದ್ಯಕೀಯ ಕಾಲೇಜಿಗೆ ಹಿರಿಯ ಪ್ರಾಧ್ಯಾಪಕರುಗಳು ಭೇಟಿ ನೀಡುತ್ತಿರುವುದು ವಿದ್ಯಾ ಸಂಸ್ಥೆಗೆ ಮೆರುಗು ಬಂದಂತಾಗಿದೆ ಎಂದು ದಂತ ಕಾಲೇಜಿನ ಡೀನ್ ಪ್ರೊ.ಡಾ. ಸುನಿಲ್ ಮುದ್ದಯ್ಯ ಹೇಳಿದರು. ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿನ 2018ರ ಪದವಿ ಪ್ರದಾನ ಸಮಾರಂಭದಲ್ಲಿ ಅವರು…