ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪ್ರದಾನ
ಕೊಡಗು

ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪ್ರದಾನ

October 5, 2018

ವಿರಾಜಪೇಟೆ: ಕೊಡಗು ದಂತ ಕಾಲೇಜಿನಲ್ಲಿ ದಂತ ಆರೋಗ್ಯ ಕ್ಷೇತ್ರದ 9 ವಿಭಾಗಗಳಲ್ಲಿಯು ಸ್ನಾತಕೋತ್ತರ ತರ ಬೇತಿ ಲಭ್ಯವಿದ್ದು, ಈಗಾಗಲೇ ಸಂಸ್ಥೆಯು ತಜ್ಞ ದಂತ ವೈದ್ಯರುಗಳನ್ನು, ಉಪನ್ಯಾಸ ಕರುಗಳನ್ನು ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡು ಗೆಯಾಗಿ ನೀಡಿದೆ.

ದಂತ ವೈದ್ಯಕೀಯ ಕಾಲೇಜಿಗೆ ಹಿರಿಯ ಪ್ರಾಧ್ಯಾಪಕರುಗಳು ಭೇಟಿ ನೀಡುತ್ತಿರುವುದು ವಿದ್ಯಾ ಸಂಸ್ಥೆಗೆ ಮೆರುಗು ಬಂದಂತಾಗಿದೆ ಎಂದು ದಂತ ಕಾಲೇಜಿನ ಡೀನ್ ಪ್ರೊ.ಡಾ. ಸುನಿಲ್ ಮುದ್ದಯ್ಯ ಹೇಳಿದರು.

ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿನ 2018ರ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತ ನಾಡುತ್ತ, ದಂತ ಕಾಲೇಜು ಉತ್ತರ ಅಮೇರಿಕ, ಯುರೋಪ್ ಹಾಗೂ ದಕ್ಷಿಣ ಪೂರ್ವ ಏಷ್ಯಾ ಖಂಡದಿಂದ 5 ಹೆಸ ರಾಂತ ವಿಶ್ವವಿದ್ಯಾನಿಲಯಗಳು ಕೊಡಗು ದಂತ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರ ಫಲವಾಗಿ ವಿದೇ ಶದ ವಿಶ್ವ ವಿದ್ಯಾಲಯದ ಸಂಶೋಧಕರು ಪ್ರಾಧ್ಯಾಪಕರುಗಳು ದಂತ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡುತ್ತಿರುವುದರಿಂದ ವಿದ್ಯಾಸಂಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಗ್ಯಾರಿಯನ್ ಆರ್ಥೋಡಾಂಟಿಕ್ ಸಂಸ್ಥೆಯ ಅಧ್ಯಕ್ಷರು, ಡೆಬೆರೆಸಿಯನ್ ಹಂಗ್ಯಾರಿ ಆರ್ಥೋಡಾಂಟಿಕ್ ವಿಶ್ವ ವಿದ್ಯಾಲಯದ ಉಪನ್ಯಾಸಕ ಪ್ರೊ.ಪೀಟರ್ ಬಾರ್‍ಬ್ಲೇ ಮಾತನಾಡಿ, ಕೊಡಗು ದಂತ ವೈದ್ಯ ಕೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಜನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ. ಈ ಕಾಲೇಜು ವಿಶ್ವದ ಬೇರೆ ದಂತ ವೈದ್ಯ ಕೀಯ ವಿದ್ಯಾಲಯಗಳ ಜೊತೆ ಒಡಂ ಬಡಿಕೆ ಮಾಡಿಕೊಂಡಿರುವುದರಿಂದ ಹೆಚ್ಚಿನ ಮಹತ್ವ ಪಡೆಯುವಂತಾಗಿದೆ ಎಂದರು.
ಸಮಾರಂಭದಲ್ಲಿ 46 ಮಂದಿಗೆ ಪದವಿ ಹಾಗೂ 35 ಮಂದಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಡಾ.ಆನ್ಮೋಲ್ ಕಲಾ ಕಾಲೇ ಜಿನ ಪ್ರಾಂಶುಪಾಲ ಡಾ.ಕೆ.ಸಿ.ಪೊನ್ನಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ಆನ್ಮೋಲ್ ಕಲಾ ಅವರು ‘ಜರ್‍ನಲ್ ಆಫ್ ಮಲ್ಟಿಡಿಸೆಪ್ಲೆನರಿ ಡೆಂಟಲ್ ರಿಸರ್ಚ್’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕೊಡಗು ದಂತ ವೈದ್ಯಕೀಯ ಕಾಲೇಜಿನ ಪ್ರತಿಷ್ಠತ ಚಿನ್ನದ ಪದಕವನ್ನು ಡಾ.ಕೊಂಗ ಕೊನಾ ಭಾರಧ್ವಾಜ್, ಎಂ.ಝಡ್. ನೌಷಿಯ ಹಾಗೂ ಎಂ.ಸಿ.ಶ್ವೇತಾ ಇವರು ಗಳಿಗೆ ಪ್ರೊ.ಪೀಠರ್ ಬಾರ್ ಬ್ಲೇ, ಟ್ರಸ್ಟ್‍ನ ಕೆ.ಕೆ.ಅಯ್ಯಪ್ಪ ಮತ್ತು ಕಾಲೇಜಿನ ಡೀನ್ ಸುನಿಲ್ ಮುದ್ದಯ್ಯ ವಿತರಿಸಿದರು.

Translate »