ಹೆದ್ದಾರಿ ಅಗಲೀಕರಣ ವೇಳೆ ಮನೆ ಧ್ವಂಸ ಪ್ರಕರಣ
ಮೈಸೂರು

ಹೆದ್ದಾರಿ ಅಗಲೀಕರಣ ವೇಳೆ ಮನೆ ಧ್ವಂಸ ಪ್ರಕರಣ

October 5, 2018

2 ತಿಂಗಳೊಳಗೆ ಮನೆ ನಿರ್ಮಾಣಕ್ಕೆ ಮಾನವ ಹಕ್ಕು ಆಯೋಗ ಆದೇಶ
ಕೊಳ್ಳೇಗಾಲ:  ಕೊಳ್ಳೇಗಾಲ ಪಟ್ಟಣದ ನಡುವೆ ಹಾದು ಹೋಗುವ ಹೆದ್ದಾರಿ ಅಗಲೀಕರಣದ ವೇಳೆ ಮನೆ ಕಳೆದುಕೊಂಡ ಹೊಸ ಅಣಗಳ್ಳಿ ನಿವಾಸಿ ಮರಿಸಿದ್ದಯ್ಯ ಎಂಬುವರಿಗೆ 2 ತಿಂಗಳೊಳಗಾಗಿ ಮನೆ ನಿರ್ಮಿಸಿಕೊಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಹತ್ವದ ಆದೇಶ ನೀಡಿದೆ.

ಪಟ್ಟಣದಲ್ಲಿ 36 ಕೋಟಿ ರೂ. ಅಂದಾಜಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರ ನಡೆಸಿದ ರಸ್ತೆ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಯಾವುದೇ ನೋಟಿಸ್ ನೀಡದೆ, ಕಾಲಾವಕಾಶ ಸಹಾ ನೀಡದೆ ನಿಯಮ ಉಲ್ಲಂಘನೆ ಮಾಡಿ ಮನೆಯನ್ನು ಒಡೆಯಲಾಗಿತ್ತು. ಇದರಿಂದ ನನಗೆ ಅನ್ಯಾಯ ವಾಗಿದ್ದು ನ್ಯಾಯ ದೊರಕಿಸಿಕೊಡುವಂತೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿಚಾರಣೆ ನಡೆಸಿ ಹೆದ್ದಾರಿ ಪ್ರಾಧಿಕಾರ ಮತ್ತು ನಗರ ಸಭೆಯ ಅಧಿಕಾರಿ ವರ್ಗ ಮರಿಸಿದ್ದಯ್ಯ ಅವರ ಮನೆ ತೆರವುಗೊಳಿಸುವ ಮುನ್ನ ಯಾವುದೇ ನಿಯಮಗಳನ್ನು ಪಾಲಿಸಿಲ್ಲ, ಕಟ್ಟಡ ಮಾಲೀಕರ ಅಹವಾಲನ್ನು ಸ್ವೀಕರಿಸಿಲ್ಲ, ಆಸ್ತಿ ಮೌಲ್ಯ ನಿರ್ಧರಿಸಿಲ್ಲ, ಆಸ್ತಿಗೆ ಸೂಕ್ತ ಪರಿಹಾರ ನೀಡದೆ ನಗರಸಭೆ ಸರ್ವಾಧಿಕಾರಿ ಧೋರಣೆ ತಳೆದು ಮನೆಯನ್ನು ಕೆಡವಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆದೇಶದ ದಿನದಿಂದ 2ತಿಂಗಳ ಒಳಗೆ ಮರಿಸಿದ್ದಯ್ಯ ಅವರಿಗೆ ಮನೆ ನಿರ್ಮಾಣ ಮಾಡಿಕೊಡುವುದು. 8 ವಾರದೊಳಗೆ ಮನೆ ನಿರ್ಮಾಣ ಮಾಡಿಕೊಡಲು ವಿಫಲರಾದ ಅಧಿಕಾರಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ಆಯೋಗ ಜಿಲ್ಲಾ ಮ್ಯಾಜಿಸ್ಟ್ರೇಟ್‍ರವರಿಗೆ ಸೂಚಿಸಿದೆ. ಆರ್‍ಟಿಐ ಕಾರ್ಯಕರ್ತ ಹಾಗೂ ಗ್ರಾಪಂನ ಮಾಜಿ ಸದಸ್ಯ ಅಣಗಳ್ಳಿ ದಶರಥ್ ಮರಿಸಿದ್ದಯ್ಯನವರ ಬೆಂಬಲಕ್ಕೆ ನಿಂತು ಅವರಿಗೆ ನ್ಯಾಯ ಸಿಗುವಂತೆ ಮಾಡಿರುವುದು ಈಗ ಚರ್ಚೆಯಾಗುತ್ತಿದೆ.

Translate »