ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ವಿನೂತನ ಸತ್ಯಾಗ್ರಹ
ಚಾಮರಾಜನಗರ

ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ವಿನೂತನ ಸತ್ಯಾಗ್ರಹ

October 5, 2018

ಚಾಮರಾಜನಗರ:  ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರು ರಕ್ತದಾನ ಮಾಡುವ ಮೂಲಕ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ಸತ್ಯಾಗ್ರಹ ನಡೆಸಿದರು.ನಗರದ ರೋಟರಿ ಭವನದಲ್ಲಿ ಜಿಲ್ಲಾಸ್ಪ ತ್ರೆಯ ರಕ್ತ ನಿಧಿ ಕೇಂದ್ರದ ನೆರವಿನೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ನೌಕರರು ರಕ್ತದಾನ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.

ರಕ್ತದಾನ ಮಾಡುವ ಶಿಬಿರಕ್ಕೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರ ವಾಧ್ಯಕ್ಷ ರಂಗಸ್ವಾಮಿ ಮೂಲಕ ಚಾಲನೆ ನೀಡಿ, ಎನ್‍ಪಿಎಸ್ ನೌಕರರ ಹೋರಾ ಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ನಿಶ್ಚಿತ ಪಿಂಚಣಿ ಎಲ್ಲರಿಗೂ ಒಂದೇ ಸಮ ನಾಗಿರಬೇಕು ಎಂದರು.

ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಹದೇವಸ್ವಾಮಿ ಮಾತನಾಡಿ, ಸರ್ಕಾರಗಳ ವಂತಿಗೆ ಆಧಾ ರಿತ ಪಿಂಚಣಿ ಯೋಜನೆಯಿಂದ ಸಮಸ್ಯೆ ಗಳು ಹೆಚ್ಚಾಗುತ್ತಿದ್ದು, ಅನೇಕ ನೌಕರರು, ಕುಟುಂಬ ವರ್ಗದವರು ಕಷ್ಟದ ಪರಿ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದರು.

ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘವು ಕಳೆದ ನಾಲ್ಕು ವರ್ಷಗಳಿಂದ ಯೋಜನೆಯ ಕರಾಳತೆ ಕುರಿತು, ನೌಕ ರರಲ್ಲಿ ಜಾಗೃತಿ ಮೂಡಿಸಿ ಅನೇಕ ಹೋರಾ ಟಗಳನ್ನು ಮಾಡಿ, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ನಿಶ್ಚಿತ ಠೇವಣಿ ನಮ್ಮ ಹಕ್ಕು, ನಮ್ಮ ಹೋರಾಟಗಳು, ಮನವಿಗೆ ಸರ್ಕಾರಗಳು ಸ್ಪಂದಿಸಲಿಲ್ಲ ಎಂದರು.

ಜ.20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಚಲೋನಲ್ಲಿ ಸುಮಾರು 90 ಸಾವಿರ ಎನ್‍ಪಿಎಸ್ ನೌಕರರು ಭಾಗ ವಹಿಸಿ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಒತ್ತಾಯಕ್ಕೆ ಮಣಿದ ಸರ್ಕಾರ ಡಿಸಿ ಆರ್‍ಜಿ ಮತ್ತು ಫ್ಯಾಮಿಲಿ ಪೆನ್ಷನ್ ಜಾರಿ ಮಾಡಿತು. ಆದಕ್ಕೂ ಕೆಲವು ಷರತ್ತುಗಳು ಒಳಪಡಿಸಿರುವುದರಿಂದ ಮತ್ತೆ ಹೋರಾಟ ಮಾಡಬೇಕಿದೆ. ಷರತ್ತುರಹಿತವಾಗಿ, ನಿಶ್ಚಿತ ಠೇವಣಿಯನ್ನು ಮರು ಸ್ಥಾಪಿಸುವಂತೆ ಮಾಡಲು ಬೃಹತ್ ಹೋರಾಟವನ್ನು ನಡೆ ಸಲು ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕ ರರ ಸಂಘವು ನಿರ್ಧರಿಸಿದೆ ಎಂದರು.

ಈ ನಿಟ್ಟಿನಲ್ಲಿ ಬುಧವಾರ ತಾಲೂಕು, ಜಿಲ್ಲಾ ಹಂತದಲ್ಲಿ ರಕ್ತಕೊಟ್ಟೇವು ಪಿಂಚಣಿ ಬಿಡೆವು ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎನ್‍ಪಿಎಸ್ ನೌಕರರು ಭಾಗವಹಿಸಿ ರಕ್ತದಾನ ಮಾಡಿದ್ದಾರೆ ಎಂದು ಅವರು ಹೇಳಿದರು.
ನಮ್ಮ ಈ ಹೋರಾಟಕ್ಕೆ ರೋಟರಿ ಸಂಸ್ಥೆ ಮತ್ತು ವಿವಿಧ ಇಲಾಖೆಗಳ ವೃಂದ ವಾರು ಸಂಘ ಸಂಸ್ಥೆಗಳು, ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದವರು ಸಹಕಾರ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸು ವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಅನುದಾನ ಸಹಿತ ಸೇರಿ ದಂತೆ ಎರಡೂವರೆ ಸಾವಿರ ಎನ್‍ಪಿಎಸ್ ನೌಕರರಿದ್ದಾರೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆ ಹೊಸ ಪಿಂಚಣಿ ಪದ್ಧತಿಯನ್ನು ರದ್ದು ಮಾಡಿ, ಹಳೇ ಪದ್ಧತಿ ಎಲ್ಲರಿಗೂ ಅನ್ವಯಿಸುವಂತೆ ಮಾಡಬೇಕು, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ತಮ್ಮ ಬೇಡಿಕೆ ಈಡೇರ ದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾ ಗುತ್ತದೆ ಎಂದರು.

ಜಿಲ್ಲಾಸ್ವತ್ರೆಯ ರಕ್ತ ನಿಧಿ ಘಟಕದ ಡಾ.ಸುಜಾತ, ಜಿಲ್ಲಾ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷೆ ನೇತ್ರಾವತಿ, ಮಹದೇವಸ್ವಾಮಿ, ಪ್ರಕಾಶ್, ಪ್ರೌಢ ಶಾಲಾ ನೌಕರರ ಸಂಘದ ಅಧ್ಯಕ್ಷ ಸಿದ್ದ ಮಲ್ಲಪ್ಪ, ಶಿವಣ್ಣ, ರಾಮಸ್ವಾಮಿ, ಮಾದಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ದೊಡ್ಡರಸಯ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸಂಘಟನಾ ಕಾರ್ಯದರ್ಶಿ ಶಿವರಾಮು ಮತ್ತಿತರರು ಉಪಸ್ಥಿತರಿದ್ದರು.

Translate »