ಹಲ್ಲೆ ಖಂಡಿಸಿ ರೈತ ಸಂಘ ಪ್ರತಿಭಟನೆ
ಚಾಮರಾಜನಗರ

ಹಲ್ಲೆ ಖಂಡಿಸಿ ರೈತ ಸಂಘ ಪ್ರತಿಭಟನೆ

October 5, 2018

ಕೊಳ್ಳೇಗಾಲ: – ದೆಹ ಲಿಯ ಉತ್ತರಪ್ರದೇಶದ ಗಡಿ ಭಾಗದ ರೈತರ ಮೇಲೆ ಕೇಂದ್ರ ಸರ್ಕಾರ ಗಾಂಧಿ ಜಯಂತಿಯಂದು ನಡೆಸಿದ ದೌರ್ಜನ್ಯ ಖಂಡಿಸಿ ಕೊಳ್ಳೇಗಾಲ ತಾಲೂಕು ರೈತರ ಸಂಘದ ಪದಾಧಿಕಾರಿಗಳು ಕೆಲ ಕಾಲ ರಸ್ತೆ ತಡೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಕಿಸಾನ್ ಕ್ರಾಂತಿ ಯಾತ್ರೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸರ್ಕಾರ ಗಾಂಧಿ ಜಯಂತಿಯಂದೇ ಏಕಾಏಕಿ ಪೆÇಲೀಸರ ಬಿಟ್ಟು ಲಾಠಿ ಚಾರ್ಜ್ ಮೂಲಕ ದೌರ್ಜನ್ಯ ನಡೆಸಿದೆ. ತಪ್ಪಿತಸ್ಥರ ಮೇಲೆ ಕ್ರಮ ವಹಿಸ ಬೇಕು. ರೈತರ ಮೇಲೆ ಹಲ್ಲೆ ಖಂಡನೀಯ ಎಂದು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ದರು. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಪ್ರವಾಸಿ ಮಂದಿರ, ತಾಪಂ ರಸ್ತೆ, ಎಂಜಿ ಎಸ್‍ವಿ ರಸ್ತೆ, ಬಸ್ ನಿಲ್ದಾಣ, ಅಂಬೇ ಡ್ಕರ್ ರಸ್ತೆ, ರಾಜ್‍ಕುಮಾರ್ ರಸ್ತೆ, ನಾಗಪ್ಪ ವೃತ್ತ, ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೆಲಕಾಲ ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ರೈತ ಮುಖಂಡ ಶ್ರೀಕಂಠಸ್ವಾಮಿ, ಗೌಡೇ ಗೌಡ, ಬಸವರಾಜ, ಮಾದೇಶ, ಸತೀಶ್, ರಾಮೇಗೌಡ, ಪೆರಿಯಾನಾಯಗಂ, ನಾಗ ರಾಜು, ಭಾಸ್ಕರ್, ಮಲ್ಲಪ್ಪ, ಮುತ್ತುರಾಜ, ಸತೀಶ್, ಮಹದೇವಪ್ಪ, ಬಸವಣ್ಣ ಇನ್ನಿತರರು ಇದ್ದರು.

Translate »