ಮೈಸೂರು: ಹೃದ್ರೋಗಗಳ ತಡೆಗಟ್ಟುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ವಾಕಥಾನ್ ಏರ್ಪಡಿಸಲಾಗಿತ್ತು. ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ಮೈ ಹಾರ್ಟ್, ಯುವರ್ ಹಾರ್ಟ್(ನನ್ನ ಹೃದಯ, ನಿಮ್ಮ ಹೃದಯ)’ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ವಾಕಥಾನ್‍ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೆ.ಕೆ.ಮೈದಾನದ ಬಳಿ ಚಾಲನೆ ನೀಡಿದರು. ಸಂಸ್ಥೆಯ ಸದಸ್ಯರು, ಹೃದ್ರೋಗಿಗಳು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ವಾಕಥಾನ್‍ನಲ್ಲಿ ಭಾಗಿಯಾಗಿ ಹೃದ್ರೋಗಗಳನ್ನು ತಡೆಗಟ್ಟು ವಿಕೆ ಬಗ್ಗೆ ಅರಿವು ಮೂಡಿಸಿದರು….