ವಾಕಥಾನ್ ಮೂಲಕ ಹೃದ್ರೋಗ ನಿಯಂತ್ರಣ ಜಾಗೃತಿ
ಮೈಸೂರು

ವಾಕಥಾನ್ ಮೂಲಕ ಹೃದ್ರೋಗ ನಿಯಂತ್ರಣ ಜಾಗೃತಿ

October 8, 2018

ಮೈಸೂರು: ಹೃದ್ರೋಗಗಳ ತಡೆಗಟ್ಟುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ವಾಕಥಾನ್ ಏರ್ಪಡಿಸಲಾಗಿತ್ತು.

ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ಮೈ ಹಾರ್ಟ್, ಯುವರ್ ಹಾರ್ಟ್(ನನ್ನ ಹೃದಯ, ನಿಮ್ಮ ಹೃದಯ)’ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ವಾಕಥಾನ್‍ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೆ.ಕೆ.ಮೈದಾನದ ಬಳಿ ಚಾಲನೆ ನೀಡಿದರು.

ಸಂಸ್ಥೆಯ ಸದಸ್ಯರು, ಹೃದ್ರೋಗಿಗಳು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ವಾಕಥಾನ್‍ನಲ್ಲಿ ಭಾಗಿಯಾಗಿ ಹೃದ್ರೋಗಗಳನ್ನು ತಡೆಗಟ್ಟು ವಿಕೆ ಬಗ್ಗೆ ಅರಿವು ಮೂಡಿಸಿದರು. ಜೆ.ಕೆ.ಮೈದಾನದಿಂದ ಆರಂಭವಾದ ವಾಕಥಾನ್ ದಿವಾನ್ಸ್ ರಸ್ತೆ, ಧನ್ವಂತ್ರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ರೈಲ್ವೇ ನಿಲ್ದಾಣ ವೃತ್ತದ ಮೂಲಕ ಸಾಗಿ ಜೆ.ಕೆ. ಮೈದಾನದ ಬಳಿಯೇ ಅಂತ್ಯಗೊಂಡಿತು. ಯದುವೀರ್ ಅವರೂ ಸ್ವಲ್ಪ ದೂರ ನಡಿಗೆಯಲ್ಲಿ ಕ್ರಮಿಸಿ, ಸಾಥ್ ನೀಡಿದರು.

ಬಳಿಕ ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ(ಎಂಎಂಸಿಆರ್‍ಐ)ಯ ಅಮೃತ ಮಹೋತ್ಸವ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ ಅವರು ಉದ್ಘಾ ಟಿಸಿದರು. ಕಾರ್ಡಿಯಾ ಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಮೈಸೂರು ಘಟಕದ ಅಧ್ಯಕ್ಷ ಡಾ. ಹರ್ಷ ಬಸಪ್ಪ, ಕಾರ್ಯ ದರ್ಶಿ ಡಾ.ಕೆ.ಎಸ್.ರಜಿತ್, ಉಪಾಧ್ಯಕ್ಷ ಡಾ.ದಿನೇಶ್ ಬಸವಣ್ಣ, ಖಜಾಂಚಿ ಡಾ.ಜೆ.ವೀನು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಡಾ.ಡಿ.ಶಶಿರೇಖಾ ಹಾಗೂ ಡಾ.ಎನ್.ಎಸ್. ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »