ಮಡಿಕೇರಿ: ಪ್ರವಾಸಿತಾಣ ದುಬಾರೆಯಲ್ಲಿ ರ‍್ಯಾಫ್ಟಿಂಗ್ ನಡೆಸಲು ಸದ್ಯ ಕ್ಕಂತು ಅವಕಾಶ ದೊರೆಯುವ ಲಕ್ಷಣ ಗಳು ಗೋಚರಿಸುತ್ತಿಲ್ಲ. ನಂಜರಾಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ದುಬಾರೆ ಪ್ರವಾಸಿ ತಾಣದಲ್ಲಿ ನೂರಾರು ಮಂದಿ ಸ್ಥಳೀಯರು ರ‍್ಯಾಫ್ಟಿಂಗ್ ಮೂಲಕ ಬದುಕು ಕಟ್ಟಿಕೊಂಡಿದ್ದರು. ಕೆಲವರು ಅಧಿಕೃತ ಪರವಾನಗಿ ಪಡೆದು ರ‍್ಯಾಫ್ಟಿಂಗ್ ನಡೆಸಿದರೆ, ಮತ್ತೆ ಕೆಲವರು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ರೆಂಬ ಪ್ರಭಾವ ಬಳಸಿ ರ‍್ಯಾಫ್ಟಿಂಗ್ ಉದ್ಯಮ ವನ್ನು ದಂಧೆಯಂತೆ ಪರಿವರ್ತಿಸಿದ್ದರು. ಮಾತ್ರವಲ್ಲದೇ ರ‍್ಯಾಫ್ಟಿಂಗ್ ಗೆ ಬರುವ ಹೊರ ಊರುಗಳ ಪ್ರವಾಸಿಗರಿಂದ ದುಬಾರಿ…