ದುಬಾರೆಯಲ್ಲಿ ರ‍್ಯಾಫ್ಟಿಂಗ್ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ಕೊಡಗು

ದುಬಾರೆಯಲ್ಲಿ ರ‍್ಯಾಫ್ಟಿಂಗ್ ಟೆಂಡರ್ ಪ್ರಕ್ರಿಯೆಗೆ ಹೈಕೋರ್ಟ್ ತಡೆ

July 11, 2018

ಮಡಿಕೇರಿ:  ಪ್ರವಾಸಿತಾಣ ದುಬಾರೆಯಲ್ಲಿ ರ‍್ಯಾಫ್ಟಿಂಗ್ ನಡೆಸಲು ಸದ್ಯ ಕ್ಕಂತು ಅವಕಾಶ ದೊರೆಯುವ ಲಕ್ಷಣ ಗಳು ಗೋಚರಿಸುತ್ತಿಲ್ಲ. ನಂಜರಾಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ದುಬಾರೆ ಪ್ರವಾಸಿ ತಾಣದಲ್ಲಿ ನೂರಾರು ಮಂದಿ ಸ್ಥಳೀಯರು ರ‍್ಯಾಫ್ಟಿಂಗ್ ಮೂಲಕ ಬದುಕು ಕಟ್ಟಿಕೊಂಡಿದ್ದರು.

ಕೆಲವರು ಅಧಿಕೃತ ಪರವಾನಗಿ ಪಡೆದು ರ‍್ಯಾಫ್ಟಿಂಗ್ ನಡೆಸಿದರೆ, ಮತ್ತೆ ಕೆಲವರು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ರೆಂಬ ಪ್ರಭಾವ ಬಳಸಿ ರ‍್ಯಾಫ್ಟಿಂಗ್ ಉದ್ಯಮ ವನ್ನು ದಂಧೆಯಂತೆ ಪರಿವರ್ತಿಸಿದ್ದರು. ಮಾತ್ರವಲ್ಲದೇ ರ‍್ಯಾಫ್ಟಿಂಗ್ ಗೆ ಬರುವ ಹೊರ ಊರುಗಳ ಪ್ರವಾಸಿಗರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳು ಈ ಹಿಂದೆಯೂ ಹಲವು ಬಾರಿ ಕೇಳಿ ಬಂದಿತ್ತು. ಈ ವಿಚಾರಕ್ಕೆ ಪ್ರವಾ ಸಿಗರು ಮತ್ತು ರ‍್ಯಾಫ್ಟಿಂಗ್ ನಡೆಸುವವರ ನಡುವೆ ಅದೆಷ್ಟೊ ಬಾರಿ ಕಲಹಗಳು ಕೂಡ ನಡೆದಿದೆ.

ಹಲವು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿ ರಾಜ್ಯವ್ಯಾಪ್ತಿ ಸುದ್ದಿಯಾಗಿತ್ತು. ಫೆಬ್ರವರಿ ತಿಂಗಳಲ್ಲಿ ಹೈದಾರಾಬಾದ್ ನಿಂದ ದುಬಾರೆಗೆ ಪ್ರವಾಸಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿಯ ಮೇಲೆ ಸ್ಥಳೀಯ ರ‍್ಯಾಫ್ಟಿಂಗ್ ಸಿಬ್ಬಂದಿಗಳು ಹಲ್ಲೆ ನಡೆಸಿದ ಪರಿಣಾಮ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಭಂದಿಸಿದಂತೆ ಪೊಲೀಸರು ಸ್ಥಳೀಯ ಆರು ಮಂದಿ ರ‍್ಯಾಫ್ಟಿಂಗ್  ಸಿಬ್ಬಂದಿಗಳನ್ನು ಬಂಧಿಸಿದ್ದರು. ಈ ಅಹಿತಕರ ಘಟನೆಯ ಬಳಿಕ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ದುಬಾರೆಯಲ್ಲಿ ರ‍್ಯಾಫ್ಟಿಂಗ್ ಕ್ರೀಡೆಗೆ ಸಂಪೂರ್ಣ ನಿಷೇದ ಹೇರಿ ಆದೇಶ ಹೊರಡಿಸಿದ್ದರು. 5 ತಿಂಗಳಿನಿಂದ ಬಂದ್ ಆಗಿದ್ದ ರ‍್ಯಾಫ್ಟಿಂಗ್ ಉದ್ಯಮವನ್ನು ಮತ್ತೆ ಆರಂಭಿಸಲು ಜಿಲ್ಲಾಡಳಿತ ಹೊಸ ದಾಗಿ ಟೆಂಡರ್ ಕರೆಯಲು ಆನ್‍ಲೈನ್ ಮೂಲಕ ಮುಂದಾಗಿತ್ತು. ಆದರೆ ಇದೀಗ ಜಿಲ್ಲಾಧಿಕಾರಿಗಳು ಟೆಂಡರ್ ಕರೆಯುವ ನಿಟ್ಟಿನಲ್ಲಿ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ದುಬಾರೆಯಲ್ಲಿ ರ‍್ಯಾಫ್ಟಿಂಗ್ ವಿಚಾರ ದಲ್ಲಿ ಅನಾರೋಗ್ಯಕರ ಪೈಪೋಟಿ ಕಂಡು ಬಂದಿದ್ದಲ್ಲದೆ, ಅಹಿತಕರ ಘಟನೆಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ರ‍್ಯಾಫ್ಟಿಂಗ್ ನಡೆಸುವುದು ಅಪಾಯಕಾರಿ ಯಾಗಿದ್ದು, ನಿಯಮಾನುಸಾರ ಜಿಲ್ಲಾಡಳಿತದ ಮೂಲಕ ಸಮಿತಿ ರಚಿಸಿ, ಟೆಂಡರ್ ಆಹ್ವಾನಿಸಿ ರ‍್ಯಾಫ್ಟಿಂಗ್ ಅನುಮತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

ಇದರ ವಿರುದ್ಧ ನಂಜರಾಯಪಟ್ಟಣದ ನಿವಾಸಿ ಬಿ.ಸಿ. ಮಾದಯ್ಯ ಎಂಬವರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶಗಳನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಮಾದಯ್ಯ ಅವರು ವಕೀಲ ನವೀನ್ ಬಿದ್ದಪ್ಪ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶದ ಮೇಲೆ ತಡೆಯಾಜ್ಞೆ ನೀಡಿದೆ.

Translate »