ಚಾಮರಾಜನಗರ: ಹೆಚ್ಚು ಓದು-ಬರಹದಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಡಿ.ಭಾರತಿ ಹೇಳಿದರು. ತಾಲೂಕಿನ ಬೇಡರಪುರ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ರಂಗವಾಹಿನಿ ಸಂಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ವಿಶ್ವಪುಸ್ತಕ ದಿನಾಚರಣೆ ಅಂಗವಾಗಿ ಓದು ಮತ್ತು ಬರಹ ಕುರಿತು ಸಂವಾದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಪುಸ್ತಕ ದಿನಾಚರಣೆ ಬಹಳ ವಿಶೇಷ ದಿನಾಚರಣೆಯಾಗಿದೆ. ಇಂತಹ…