ತಿ.ನರಸೀಪುರ: ವರುಣದ ಕೃಪೆಯಿಂದ ಧರೆಗಿಳಿದು ಹಚ್ಚ ಹಸುರಿನಲ್ಲಿ ಮೈತಳೆದ ಜೀವಗಂಗೆ ಕಾವೇರಿ ಮಾತೆಯನ್ನು ಪೂಜಿಸಿ ಗೌರವಿಸುವ ಕಾವೇರಿ ಸಂಭ್ರಮ ಎಂಬ ವಿಶಿಷ್ಟವಾದ ವಿನೂತನ ಕಾರ್ಯಕ್ರಮ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ನೆರೆಯ ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿರುವಂತಹ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮ ಸೋಮವಾರ ಸಂಜೆ ಮಿನಿ ದಸರಾ ಮಾದರಿಯಲ್ಲಿ ನಡೆದಂತಹ ಕಾವೇರಿ ಸಂಭ್ರಮ ಸಡಗರದ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಬೆಳ್ಳಿ ರಥದಲ್ಲಿ ವೀರಾಜಮಾನಳಾಗಿದ್ದ ಕಾವೇರಿ ಮಾತೆಯ ಉತ್ಸವದ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರ ನೀಡಿದರೆ, ಹಳ್ಳಿ…