ಬೇಲೂರು: ಇಲ್ಲಿನ ಮೀನು ಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಗಚಿ ಜಲಾಶಯದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಅಕ್ರಮ ಮೀನುಗಾರಿಕೆ ಬೆಳಕಿಗೆ ಬಂದಿದ್ದು, ಯಗಚಿ ಮೀನುಗಾರರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಆರೋಪಿಯೋರ್ವನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿ ವೇಳೆ ಯಗಚಿ ಜಲಾಶಯದ ಬೆಣ್ಣೂರು ಸಮೀಪದ ಹಿನ್ನೀರಿನಲ್ಲಿ ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಹಾಕಿರುವ ಸುದ್ದಿ ತಿಳಿದು ಶನಿವಾರ ಬೆಳಿಗ್ಗೆ ಸಂಘ ಅಧ್ಯಕ್ಷ ಹನುಮಂತು ತಮ್ಮ ಸದಸ್ಯರೊಂದಿಗೆ ಸ್ಥಳಕ್ಕೆ ತೆರಳಿದಾಗ ಜಲಾಶಯದಲ್ಲಿ ಮೀನು ಹಿಡಿಯಲು ಬಲೆ ಹಾಕಿರುವುದು…