ಮೈಸೂರು: ಯೋಗ ಮತ್ತು ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 6 ಮಂದಿ ಗಣ್ಯರಿಗೆ `ಯೋಗ ಭೂಷಣ’ ಪ್ರಶಸ್ತಿಯನ್ನು ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ ಶನಿವಾರ ಪ್ರದಾನ ಮಾಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಹಿಮಾಲಯ ಫೌಂಡೇಷನ್ ವತಿ ಯಿಂದ ನಡೆದ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದ ಸಾಧಕ ರಾದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಕೆ.ಆರ್. ಯೋಗಾನರಸಿಂಹನ್, ಎಂ.ಪಿ.ರಮೇಶ್‍ಬಾಬು, ಬಿ.ರವಿ, ಅಜಯ್‍ಕುಮಾರ್, ಪ್ರೇಮಾ ಮಂಜುನಾಥ್ ಅವರಿಗೆ ಈ ಸಾಲಿನ `ಯೋಗ ಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂತರ…