ಕೊಡಗು

ವಿಜಯದಶಮಿ ಸ್ತ್ರೀ ಕುಲಕ್ಕೆ ಗೌರವದ ಸಂಕೇತ

October 27, 2020

ವಿರಾಜಪೇಟೆ,ಆ.26-ಭಾರತ ಖಂಡ ಹಬ್ಬಗಳ ಆಚರಣೆಯಲ್ಲಿ ಶ್ರೇಷ್ಟತೆ ಹೊಂದಿದ್ದು, ಶತ್ರು ಸಂಹಾರಿಣಿÀ ಚಾಮುಂಡೇಶ್ವರಿಯನ್ನು ಸ್ತೂತಿಸುವುದೇ ವಿಜಯದಶಮಿ ವಿಶೇಷ. ಈ ಹಬ್ಬ ಸ್ತ್ರೀ ಕುಲಕ್ಕೆ ಗೌರವದ ಸಂಕೇತ ಎಂದು ತಾಲೂಕು ವಿದ್ಯಾರ್ಥಿ ಪ್ರಮುಖ್ ಸುಬ್ರಮಣಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ವಿರಾಜಪೇಟೆ ನಗರ ಶಾಖೆ ಯಿಂದ ನಗರದ ದೇವಾಂಗ ಬೀದಿಯ ಚಾಮುಂಡಿ ಶಾಖೆಯಲ್ಲಿ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಖಂಡವು ಮಹಿಳೆಯನ್ನು ಪೂಜ ನೀಯ ಭಾವದಿಂದ ಆರಾಧಿಸಿ ಕೊಂಡು ಬರುತ್ತಿದೆ. ಸಾವಿರಾರು ವರ್ಷಗಳ ಸುಸಂಸ್ಕøತ ಸಂಸ್ಕøತಿ ಹೊಂದಿದೆ. ಇಂದು ದೇವಿ ಚಾಮುಂಡೇಶ್ವರಿಯು ಮಹಿಷಾಸುರನ ವಧೆ ಮಾಡಿದ ದಿನ. ರಾಮಯಾಣ ಕಾಲದಲ್ಲಿ ಪ್ರಭು ಶ್ರೀರಾಮಚಂದ್ರ ರಾವಣನೊಂದಿಗೆ ಯುದ್ಧ ಸಾರಿ ವಿಜಯವಾದ ದಿನ. ಮಹಾ ಭಾರತದ ಕಾಲದಲ್ಲಿ ಪಾಂಡವರು ಅಜ್ಞಾತ ವಾಸ ಮುಗಿಸಿ ಹಿಂದಿರುಗಿ ಕೌರವ ರೊಂದಿಗೆ ಕುರುಕ್ಷೇತ್ರ ಸಮರಕ್ಕೆ ಸಿದ್ಧಗೊಂಡ ಸುದಿನ ಎಂದರು.

ಡಾ.ಕೇಶವ ಬಲಿರಾಂ ಹೆಡಗೆವಾರ್ ಅವರ ದಿವ್ಯದೃಷ್ಟಿಯಿಂದ ಉದಯವಾದ ಬಲಿಷ್ಟ ಹಿಂದೂ ರಾಷ್ಟ್ರ ಪರಿಕಲ್ಪನೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 1925ರಲ್ಲಿ ಸ್ಥಾಪನೆಯಾಯಿತು. ಇಂದು ದೇಶವಲ್ಲದೆ ವಿದೇಶದಲ್ಲೂ ತನ್ನ ಶಾಖೆ ಗಳನ್ನು ಹೊಂದಿದೆ. ತನ್ನ ಶಾಖೆಗಳ ಮೂಲಕ ಅಸಂಖ್ಯಾತ ದೇಶಭಕ್ತರಿಗೆ ಹಿಂದೂ ರಾಷ್ಟ್ರ ನಿರ್ಮಾಣ, ಉತ್ತಮ ನಾಯಕತ್ವ, ಧೈರ್ಯ-ಸೃಜನಶೀಲತೆಯ ವ್ಯಕ್ತಿತ್ವ ನಿರ್ಮಾಣ, ರಾಷ್ಟøದ ಸೇವೆಗೆ ಮುಂದಾಗಲು ಯುವ ಪಡೆ ಸದೃಢÀಗೊಳಿಸುವಂತಹ ಕಾರ್ಯಗಳನ್ನು ಸಂಘದ ಶಾಖೆಯ ಮೂಲಕ ಮಾಡ ಲಾಗುತ್ತಿದೆ. ವಿಜಯದಶಮಿ ಹಬ್ಬ ಒಳ ಗೊಂಡಂತೆ 5 ಹಬ್ಬಗಳನ್ನು ಪ್ರಮುಖ ವಾಗಿ ಸಂಘದಿಂದ ಅಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರ ಸೇರಿದಂತೆ ಒಟ್ಟು 10 ಭಾಗಗಳಲ್ಲಿ ವಿಜಯದಶಮಿ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನ ದಿನ ಸಹ ಅಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲೂಕು ಉದ್ಯೋಗ್ ಕಾರ್ಯ ಪ್ರಮುಖ್ ಬಿ.ವಿ.ಹೇಮಂತ್, ತಾಲೂಕು ಸಹ ಕಾರ್ಯವಾಹ ರಧೀಶ್, ನಗರ ಕಾರ್ಯವಾಹ ಎ.ಅರ್.ಯೋಗಾನಂದ ರಾವ್, ಸಹಕಾರ್ಯವಾಹ ಅರುಣ್ ಕುಮಾರ್, ಜನಾರ್ಧನ್‍ಮೂರ್ತಿ, ಸರೋಜ್ ಮೊಹಂತಿ ಹಾಗೂ ನಗರದ ವಿವಿಧೆಡೆಗಳಿಂದ ಆಗಮಿಸಿದ್ದ ಸಂಘದ ಕಾರ್ಯಕರ್ತರಿದ್ದರು. ಪೋಟೊ: 09

 

 

Translate »