ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಕೆ
ಮಂಡ್ಯ

ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಕೆ

October 27, 2020

ಮಂಡ್ಯ, ಅ.26- ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಒಟ್ಟು 12 ಸ್ಥಾನಗಳಿಗೆ ನವೆಂಬರ್ 5 ರಂದು ನಗರದ ಲಕ್ಷ್ಮೀ ಜನಾರ್ಧನ ಬಾಲಕಿಯರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಲಿದ್ದು, ನಿರ್ದೇಶಕ ಸ್ಥಾನ ಆಕಾಂಕ್ಷಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಸಿದರು.

ನ.5 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಅ.20 ರಿಂದ ನಾಮಪತ್ರ ಸಲ್ಲಿಸಲು ದಿನಾಂಕ ನಿಗಧಿಯಾಗಿದ್ದು, ಅದರಂತೆ ಅ.28 ರೊಳಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಅ.29 ರಂದು ಬೆಳಗ್ಗೆ 11 ಗಂಟೆಗೆ ರಿಟರ್ನಿಂಗ್ ಆಫೀಸರ್ ಅವರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ ಅದೇ ದಿನ ರಿಟರ್ನಿಂಗ್ ಆಫೀಸರ್ ಅವರಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಯಾಗಲಿದೆ.

ಸ್ಪರ್ಧೆ ಬಯಸಿರುವ ಅಭ್ಯರ್ಥಿಗಳು ನಾಮ ಪತ್ರವನ್ನು ಅ.30 ರಂದು ಬೆಳಗ್ಗೆ 11 ಗಂಟೆ ಯಿಂದ 3 ಗಂಟೆಯೊಳಗೆ ನಿಯಮ 14(ಸಿ) ರಡಿ ಹಿಂಪಡೆಯಲು ಅವಕಾಶವಿದೆ. ಅದೇ ದಿನ 3 ಗಂಟೆಯ ನಂತರ ರಿಟ ರ್ನಿಂಗ್ ಆಫೀಸರ್ ಅವರಿಂದ ಸ್ಪರ್ಧೆಯಲ್ಲಿರುವ ಅಂತಿಮ ಪಟ್ಟಿ ಪ್ರಕಟಣೆಯಾಗಲಿದೆ.

12 ಸ್ಥಾನಗಳ ವಿವರ ಮತ್ತು ಮತಗಳು: ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳ ಕ್ಷೇತ್ರದ ತಲಾ 1 ಸ್ಥಾನ ಮತ್ತು ಜಿಲ್ಲೆಯಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ಕ್ಷೇತ್ರ, ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ಮಂಡ್ಯ ಮತ್ತು ಪಾಂಡವಪುರ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳ (ನೇಕಾರರ ಸಹಕಾರ ಸಂಘ ಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳು(ಫಾರ್ಮಿಂಗ್ ಸಹಕಾರ ಸಂಘಗಳು ಸೇರಿದಂತೆ) ಕ್ಷೇತ್ರ ತಲಾ 1 ಸ್ಥಾನಗಳಂತೆ ಒಟ್ಟು 12 ಸ್ಥಾನಗಳಿಗೆ ಚುನಾ ವಣೆ ನಡೆಯಲಿದೆ. ಈ ಸ್ಥಾನಗಳಲ್ಲಿ 621 ಮಂದಿ ಸದಸ್ಯರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ವಿಜಯದಶಮಿಯಂದು ನಾಮಪತ್ರ ಸಲ್ಲಿಕೆಗೆ ಮುಗಿದ್ದ ಅಭ್ಯರ್ಥಿಗಳು: ಜಿಲ್ಲಾ ಸಹಕಾರ ಬ್ಯಾಂಕ್‍ನ 12 ನಿರ್ದೇಶಕ ಸ್ಥಾನಗಳಿಗೆ ಅಭ್ಯರ್ಥಿಗಳು ವಿಜಯ ದಶಮಿಯ ದಿನವಾದ ಸೋಮವಾರ 19 ಮಂದಿ ತಮ್ಮ ಬೆಂಬಗಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಇದುವರೆಗೆ ಒಟ್ಟು 25 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ಉಮೇದುವಾರಿಕೆ ಸಲ್ಲಿಕೆಗೆ ಅಗತ್ಯ ದಾಖಲೆಗಳೊಂದಿಗೆ ಆಗಮಿಸಿದ್ದ ಅಭ್ಯರ್ಥಿ ಗಳು ಅವುಗಳ ಪರಿಶೀಲನೆಯನ್ನು ಮತ್ತೊಮ್ಮೆ ಮಾಡಿಕೊಳ್ಳುತ್ತಿದ್ದದ್ದು ಕಂಡು ಬಂದಿತು.

ಮಂಡ್ಯ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎಸ್. ಪಿ.ಸತೀಶ್, ಸಿ.ಅಶ್ವತ್, ಪುರುಷೋತ್ತಮ್, ಮದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎಂ.ಹೊನ್ನೇ ಗೌಡ, ಜಿಲ್ಲೆಯ ಬಳಕೆದಾರರು, ಸಂಸ್ಕ ರಣಾ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್, ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಹಾಲಹಳ್ಳಿ ಅಶೋಕ್, ದೊಡ್ಡಲಿಂಗೇ ಗೌಡ, ಎಲೆಚಾಕನಹಳ್ಳಿ ಬಸವರಾಜು, ಪಾಂಡವಪುರ ಕೃಷಿ ಪತ್ತಿನ ಸಹ ಕಾರದಿಂದ ಗುರುಸ್ವಾಮಿ, ಬಳಕೆದಾರರು, ಸಂಸ್ಕರಣಾ ಸಹಕಾರ ಸಂಘಗಳಿಂದ ಕಾಡೇನಹಳ್ಳಿ ರಾಮಚಂದ್ರು, ಪಾಂಡವ ಪುರ ಉಪವಿಭಾಗದ ಹಾಲು ಉತ್ಪಾ ದಕರ ಸಹಕಾರ ಸಂಘದಿಂದ ಸಾದೇನ ಹಳ್ಳಿ ಚಲುವರಾಜು ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಚುನಾವಣಾ ರಿಟರ್ನಿಂಗ್ ಆಫೀಸರ್ ಆಗಿ ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆಯ ಉಪ ನಿರ್ದೇಶಕಿ ಕುಮುದಾ ಶರತ್ ಕಾರ್ಯ ನಿರ್ವಹಿಸಿದರು.

 

 

Translate »