ಮೈಸೂರು

ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ

November 22, 2020

ಮೈಸೂರು, ನ.21(ಎಂಟಿವೈ)-ವರ್ತ ಮಾನದ ಗ್ರಾಮೀಣ ಭಾರತದ ದಲಿತ ಲೋಕ ಪ್ರಜ್ಞೆಯಿಂದ ವರ್ತಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣವಾಗಬಲ್ಲದು ಎಂದು ಸಾಹಿತಿ ಪ್ರೊ. ಸಿ. ನಾಗಣ್ಣ ಅಭಿ ಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಸಿಂಧುವಳ್ಳಿ ಸುಧೀರ್ ಅವರ `ಪರದೇಶಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರೆ ಕಥೆಗಳು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ದಲಿತರು ಎದುರಿ ಸುತ್ತಿರುವ ಸಂಕಷ್ಟದ ಪರಿಸ್ಥಿತಿ, ಅವರಲ್ಲಿನ ತಳಮಳ, ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹಾಸ್ಯ, ಗಾಂಭಿರ್ಯ ಚರ್ಚೆ ಸೇರಿದಂತೆ ಇನ್ನಿತರ ಮಹತ್ತರವಾದ ಘಟ ನಾವಳಿಗಳ ನೈಜತೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಸಿಂಧುವಳ್ಳಿ ಸುಧೀರ್ ಅವರು ತಮ್ಮ ಕಥಾ ಸಂಕಲನದಲ್ಲಿ ಸೊಗಸಾಗಿ ಮೂಡಿಸಿದ್ದಾರೆ. ಇವರು ಭವಿಷ್ಯದ ಅತ್ಯು ತ್ತಮ ಸಾಹಿತಿಯಾಗಿ ಹೊರಹೊಮ್ಮಲಿ ದ್ದಾರೆ ಎಂದು ಶ್ಲಾಘಿಸಿದರು.

ದಲಿತ ಲೋಕದ ಕಷ್ಟ ಕಾರ್ಪಣ್ಯವನ್ನು ಹತ್ತಿರದಿಂದ ನೋಡಿರುವ ಸುಧೀರ್ ತಮ್ಮ ಕಥಾ ಸಂಕಲನದಲ್ಲಿ ದಲಿತರ ಸಂಕಷ್ಟವನ್ನು ಎಳೆಎಳೆಯಾಗಿ ಗ್ರಾಮೀಣ ಸೊಗಡಿನ ಭಾಷೆಯಲ್ಲೇ ವಿವರಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನರು ತಮ್ಮ ನೈಜ ಹೆಸರಿನ ಮುಂದೆ ಇಟ್ಟುಕೊಳ್ಳುವ ಅಡ್ಡ ಹೆಸರು, ಏಕವಚನದ ಸಂಭಾಷಣೆ, ವಿಡಂಬನೆ, ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಡಕೋಟ ಬಸ್ಸುಗಳು, ಬಸ್ ಪ್ರಯಾಣದ ವೇಳೆ ಸೀಟ್ ಕಾಯ್ದಿರಿಸಲು ಕಿಟಕಿಯಿಂದ ಲಗ್ಗೇಜ್ ಹಾಕುವುದು, ನಿಧಾನಕ್ಕೆ ಚಲಿ ಸುವ ಬಸ್ಸು ಸೇರಿದಂತೆ ಪ್ರಯಾಣಿಕರ ನಡುವೆ ನಡೆಯುವ ಸಂಭಾಷಣೆಯೂ ಕಥಾ ಸಂಕಲನದಲ್ಲಿ ಮೂಡಿ ಬಂದಿದ್ದು, ಓದು ಗರ ಗಮನ ಸೆಳೆಯುತ್ತದೆ ಎಂದರು.

ಸಾಹಿತಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಸಾಮಾಜಿಕ ಜಾಲತಾಣ ಗಳು ಹೆಚ್ಚು ಪ್ರಬಲವಾಗುತ್ತಿದ್ದಂತೆ ಬರೆಯು ವವರ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಸಾಹಿತ್ಯದ ಅತಿವೃಷ್ಟಿಯಾಗುತ್ತಿದೆ. ಸ್ಪರ್ಧೆಗಾಗಿ ಬರೆಯುವುದಕ್ಕೆ ಕೆಲವರು ಸೀಮಿತವಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಿಂದ ದೂರ ಇರುವ ಸಿಂಧು ವಳ್ಳಿ ಸುಧೀರ್ ತಮ್ಮ ಊರಲ್ಲೇ ಕುಳಿತು, ಮೈಸೂರು-ಚಾಮರಾಜನಗರದ ಗ್ರಾಮೀಣ ಭಾಷಾ ಸೊಗಡಿನಲ್ಲಿ ಕಥಾ ಸಂಕಲನ ಹೊರ ತಂದಿರುವುದು ಈ ಭಾಗದ ಜನರ ಮನ ಮುಟ್ಟಲಿದೆ. ಗ್ರಾಮೀಣ ಸಂವೇದನೆಯನ್ನು ಕಲಾತ್ಮಕವಾಗಿ ಕಥೆ ರೂಪದಲ್ಲಿ ಹೊರ ತಂದಿದ್ದಾರೆ. ಅಲ್ಲದೆ ದಲಿತ ಪ್ರಗತಿಪರ ಸಂವೇದನೆಯೂ ಅಡಕವಾಗಿದೆ. ಕಥೆಗಾರ ನಿಗೆ ಸೂಕ್ಷ್ಮ ದೃಷ್ಟಿ ಅನಿವಾರ್ಯ. ಆ ಸೂಕ್ಷ್ಮ ದೃಷ್ಟಿಯಿಂದ ತನ್ನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕಾಗಿದೆ. ಇದರಿಂದ ಕಥೆಯಲ್ಲಿ ಸಮಾಜದಲ್ಲಿ ಕಂಡು ಬರುವ ಸೂಕ್ಷ್ಮತೆಯನ್ನು ಪರಿಣಾಮಕಾರಿ ಯಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗು ತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಿಂಧುವಳ್ಳಿ ಸುಧೀರ್, ಮುಖಂಡ ಬಸವರಾಜು ಇದ್ದರು.

Translate »