ಹಿಮೋಫಿಲಿಯಾ ಫೆಡರೇಷನ್ ಸಂಸ್ಥಾಪನಾ ದಿನಾಚರಣೆ
ಮೈಸೂರು

ಹಿಮೋಫಿಲಿಯಾ ಫೆಡರೇಷನ್ ಸಂಸ್ಥಾಪನಾ ದಿನಾಚರಣೆ

November 22, 2020

ಮೈಸೂರು, ನ.21(ಪಿಎಂ)- ಮೈಸೂರು ಹಿಮೋಫಿಲಿಯಾ ಸೊಸೈಟಿ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಜಂಟಿ ಆಶ್ರಯದಲ್ಲಿ ಹಿಮೋಫಿಲಿಯಾ ಫೆಡರೇಷನ್‍ನ (ಇಂಡಿಯಾ) ಸಂಸ್ಥಾಪನಾ ದಿನವನ್ನು ಶನಿವಾರ ಆಚರಿಸಲಾಯಿತು.

ಜೆಕೆ ಮೈದಾನದ ಮೈಸೂರು ವೈದ್ಯ ಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದ ಮಿನಿ ಸಭಾಂಗಣದಲ್ಲಿ ಏರ್ಪ ಡಿಸಿದ್ದ ದಿನಾಚರಣೆಯಲ್ಲಿ ಸಾಧಕರು, ಕೊರೊನಾ ವಾರಿಯರ್‍ಗಳನ್ನು ಸನ್ಮಾನಿ ಸಲಾಯಿತು. ಜೊತೆಗೆ ಹಿಮೋಫಿಲಿಯಾ ವೈದ್ಯಕೀಯ ನಿರ್ವಹಣೆ ಕುರಿತು ಉಪ ನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಇಬ್ಬರು ಎಸ್‍ಎಸ್‍ಎಲ್‍ಸಿ ಹಾಗೂ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (ಮೈಸೂರು ಹಿಮೋಫಿಲಿಯಾ ಸೊಸೈಟಿ ಸದಸ್ಯರು) ಪ್ರತಿಭಾ ಪುರಸ್ಕಾರ ನೀಡ ಲಾಯಿತು. ಅಲ್ಲದೆ, ಆದಿತ್ಯ ಆಸ್ಪತ್ರೆಯ ಮೂವರು, ಹಿಮೋಫಿಲಿಯಾ ಡೇ ಕೇರ್‍ನ ಮೂವರು ಹಾಗೂ ಕೆಆರ್ ಆಸ್ಪತ್ರೆಯ ಇಬ್ಬರು ಸೇರಿದಂತೆ 8 ಮಂದಿ ನರ್ಸ್‍ಗಳನ್ನು ಕೊರೊನಾ ಸೇವೆಗಾಗಿ ಸನ್ಮಾನಿಸಲಾಯಿತು.

ಇದೇ ವೇಳೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜ ರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಉಪಾಧ್ಯಕ್ಷ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಕೆಆರ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್. ಮಂಜುನಾಥ್ ಸೇರಿದಂತೆ ಮತ್ತಿತರ ವೈದ್ಯರು ಹಿಮೋಫಿಲಿಯಾ ಅನಾರೋಗ್ಯ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ಮೈಸೂರು ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಎಸ್.ಕೆ.ಮಿತ್ತಲ್, ಉಪಾಧ್ಯಕ್ಷ ಓ.ಪ್ರತಾಪ್‍ಕುಮಾರ್, ಖಜಾಂಚಿ ಕೆ.ಬಿ. ಲಿಂಗಪ್ಪ, ಜಂಟಿ ಕಾರ್ಯದರ್ಶಿ ಜೆ.ಸತೀಶ್ ಕುಮಾರ್ ಮತ್ತಿತರರು ಹಾಜರಿದ್ದರು.

Translate »