ಪರಮಹಂಸ ಯೋಗ ವಿದ್ಯಾಲಯದಿಂದ ಯೋಗ ಶಿಕ್ಷಕರಿಗೆ ಅರ್ಹತಾ ಪತ್ರ ವಿತರಣೆ
ಮೈಸೂರು

ಪರಮಹಂಸ ಯೋಗ ವಿದ್ಯಾಲಯದಿಂದ ಯೋಗ ಶಿಕ್ಷಕರಿಗೆ ಅರ್ಹತಾ ಪತ್ರ ವಿತರಣೆ

November 22, 2020

ಮೈಸೂರು, ನ.21(ಎಂಟಿವೈ)- ಮೈಸೂರಿನ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಯೋಗ ಶಿಕ್ಷಕರ ತರಬೇತಿ ಪಡೆದ 5ನೇ ತಂಡದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದವರಿಗೆ ಕರುನಾಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಪರಮಹಂಸ ಯೋಗ ಮಹಾವಿದ್ಯಾಲಯದ 5ನೇ ತಂಡದ ಯೋಗ ಶಿಕ್ಷಕರ ತರಬೇತಿ ಶಿಬಿರದ 15ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ಹಾಗೂ ಯೋಗಾಚಾರ್ಯ ಪ್ರಶಸ್ತಿ ನೀಡಲಾಯಿತು. ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರ ಸ್ಕøತ ಡಾ.ಎ.ಎಸ್.ಚಂದ್ರಶೇಖರ್ ಅವರನ್ನು ಸನ್ಮಾನಿಸಿದರೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜ ಸೇವಕ ಕೆ.ರಘು ರಾಮ್ ವಾಜಪೇಯಿ, ಬಿಜೆಪಿ ಮುಖಂಡ ಕಡಕೊಳ ಕೆ.ಆರ್.ಹರೀಶ್, ಮನು ಬಿ.ಮೆನನ್, ಎಂ.ಕಲಾವತಿ ಹಾಗೂ ಪೂರ್ಣಿಮಾ ಅವರಿಗೆ ಕರುನಾಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಡಾ.ಎ.ಎಸ್.ಚಂದ್ರಶೇಖರ್ ಮಾತ ನಾಡಿ, ಯೋಗದಿಂದ ಎಲ್ಲವನ್ನೂ ಸಾಧಿಸಬಹುದಾಗಿದೆ. ಯೋಗ ಕೇಂದ್ರವೂ ಆಗಿರುವ ಮೈಸೂರಿಗೆ ದೇಶ-ವಿದೇಶಗಳಿಂದ ಪ್ರವಾಸಿ ಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವ ಅನಿ ವಾರ್ಯತೆ ಇದೆ. 2018ರಲ್ಲಿ ದಸರಾ ಮಹೋತ್ಸವದ ವೇಳೆ ಯೋಗ ದಸರಾ ಕಾರ್ಯಕ್ರಮ ಆಯೋಜಿಸುವಂತೆ ಒತ್ತಾಯಿಸಿದ್ದೆ. ಆ ಸಂದರ್ಭದಲ್ಲಿ ಯೋಗ ದಸರಾ ಕಾರ್ಯಕ್ರಮ ಯಶಸ್ವಿ ಯಾಗುವುದಿಲ್ಲ ಎಂಬ ಅಭಿಪ್ರಾಯ ಕೆಲವರಲ್ಲಿ ಮೂಡಿತ್ತು. ಆದರೆ ಮೈಸೂರಲ್ಲಿರುವ ಎಲ್ಲಾ ಯೋಗ ಶಿಕ್ಷಣ ಸಂಸ್ಥೆಗಳಿಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಯೋಗ ದಸರಾ ದಿನದಂದು ಮನೆಗಳ ಮುಂದೆ, ಬಡಾವಣೆಗಳಲ್ಲಿರುವ ಪಾರ್ಕ್‍ಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ ಯೋಗದಸರಾವನ್ನು ಯಶಸ್ವಿಗೊಳಿಸಿದರು. ಅದೇ ವರ್ಷ ಯೋಗ ದಸರಾ ಸಂಬಂ ಧಿತ ಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ಯೋಗಕ್ಕೆ ಇರುವ ಮಹತ್ವವನ್ನು ಪ್ರದರ್ಶಿಸಲಾಯಿತು ಎಂದರು.

ಪರಮಹಂಸ ಯೋಗ ಮಹಾವಿದ್ಯಾಲಯದ ಅಧ್ಯಕ್ಷ ಯೋಗ ಚಾರ್ಯ ಶಿವಪ್ರಕಾಶ್ ಗುರೂಜಿ ಮಾತನಾಡಿ, ಮೈಸೂರಲ್ಲಿ ಪರಮ ಹಂಸ ಯೋಗ ಮಹಾವಿದ್ಯಾಲಯದಲ್ಲಿ ಯೋಗ ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ. ಶಿಬಿರದಲ್ಲಿ ಯೋಗಾಸನ, ಯೋಗ ಥೆರಪಿ, ಪ್ರಾಣಾಯಾಮ, ಧ್ಯಾನ, ಮುದ್ರೆ, ಯೋಗಶಾಸ್ತ್ರ, ಶರೀರಶಾಸ್ತ್ರ, ಆಹಾರ ಕ್ರಮ, ಮನೆಮದ್ದು, ಜೀವನ ಕೌಶಲ್ಯ, ಅಷ್ಟಾಂಗ ಯೋಗದ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಯೋಗರತ್ನ ಟಿ.ಜಲೇಂದ್ರಕುಮಾರ್, ಯೋಗಪ್ರಕಾಶ್ ಗುರೂಜಿ, ಡಾ.ಮಾಲತೇಶ್ ಆಚಾರ್ಯ, ಡಾ.ಭಾವನಾ ಆರ್.ಮಧುಸೂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »