ಮೈಸೂರು

ಕೊರೊನಾ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮೈಸೂರು ದೇವಾಲಯಗಳಲ್ಲಿ ದೇವರ ದರ್ಶನ ವ್ಯವಸ್ಥೆ

December 25, 2020

ಮೈಸೂರು,ಡಿ.24(ಆರ್‍ಕೆ)- ವೈಕುಂಠ ಏಕಾದಶಿ ಧಾರ್ಮಿಕ ಕೈಂಕರ್ಯಕ್ಕಾಗಿ ಮೈಸೂ ರಿನ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ವಿಷ್ಣು ದೇವಾಲಯಗಳಲ್ಲಿ ಕೊರೊನಾ ಮುಂಜಾ ಗ್ರತಾ ಕ್ರಮದೊಂದಿಗೆ ಸಕಲ ಸಿದ್ಧತೆ ನಡೆಸ ಲಾಗಿದೆ. ನಾಳೆ(ಡಿ.25) ನಡೆಯಲಿರುವ ಏಕಾದಶಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಷ್ಣು ದೇವಾಲಯದ ವೈಕುಂಠ ದ್ವಾರದಲ್ಲಿ ಪ್ರವೇಶಿಸಲು ಭಕ್ತಾದಿ ಗಳು ಸಿದ್ಧರಾಗಿದ್ದು, ದೇವರ ದರ್ಶನ ಪಡೆ ಯಲು ಕಾತುರರಾಗಿದ್ದಾರೆ.

ಮಾರ್ಗಶಿರ(ಡಿಸೆಂಬರ್-ಜನವರಿ) ಮಾಸದಲ್ಲಿ ನಡೆಯಲಿರುವ ಈ ಹಬ್ಬವನ್ನು ದಕ್ಷಿಣ ಭಾರತದ ಎಲ್ಲಾ ವಿಷ್ಣು ದೇವಾ ಲಯಗಳಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಕೊರೊನಾ ಆತಂಕವಿರುವುದರಿಂದ ಸರ್ಕಾ ರದ ಮಾರ್ಗಸೂಚಿಯನ್ವಯ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಿಷ್ಣು ದೇವಾಲಯಗಳಲ್ಲಿ ಕೈಗೊಳ್ಳಲಾಗಿದೆ.

ಕೆಲದೇವಾಲಯಗಳಲ್ಲಿ ಶ್ರೀ ವಿಷ್ಣುವಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೆಲ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಭಕ್ತಾದಿ ಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಮೈಸೂರಿನ ಒಂಟಿಕೊಪ್ಪಲಿನ ಪ್ರಸಿದ್ಧ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾ ಲಯಕ್ಕೆ ನಾಳೆ(ಡಿ.25) ಪ್ರವೇಶ ನಿಷೇಧಿಸ ಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಿ ಸಿದೆ. ನಂಜನಗೂಡು ರಸ್ತೆಯಲ್ಲಿರುವ ಗಣ ಪತಿ ಸಚ್ಚಿದಾನಂದ ಆಶ್ರಮದ ಶ್ರೀ ವೆಂಕ ಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾ ದಶಿಯಂದು ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಶೇಷ ಪೂಜೆ, ತೀರ್ಥ ಪ್ರಸಾದವೇನೂ ಇರುವುದಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡಿದ ಬಳಿಕ ಸ್ಥಳದಲ್ಲಿ ನಿಲ್ಲದೇ ನಿರ್ಗಮಿಸಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ. ಇಸ್ಕಾನ್ ದೇವಾಲಯ ದಲ್ಲಿ ಎಂದಿನಂತೆ ನಾಳೆ ದೇವರ ದರ್ಶನವಿದ್ದು, ವೈಕುಂಠದ್ವಾರ ಪೂಜಾ ಕೈಂಕರ್ಯಗಳೂ ನಡೆಯುತ್ತವೆ ಎಂದು ದೇವಸ್ಥಾನದ ವಿನೂತನ್ ಮಹೇಶ ತಿಳಿಸಿದ್ದಾರೆ. ಕೈಕಾಲು ತೊಳೆದು ಕೊಂಡು ಮಾಸ್ಕ್ ಧರಿಸಿ ದೇವರ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎಂದಿ ನಂತೆ ಎಲ್ಲಾ ಸೇವೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.

 

Translate »