ಕುಪ್ಪಣ್ಣ ಪಾರ್ಕ್ ಈಗ ಶೂಟಿಂಗ್ ಸ್ಪಾಟ್
ಮೈಸೂರು

ಕುಪ್ಪಣ್ಣ ಪಾರ್ಕ್ ಈಗ ಶೂಟಿಂಗ್ ಸ್ಪಾಟ್

December 25, 2020

ಮೈಸೂರು, ಡಿ.24- ನಾಡಹಬ್ಬ ದಸರಾ ವೇಳೆ ಫಲಪುಷ್ಪ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿದ್ದ ಮೈಸೂರಿನ ಕುಪ್ಪಣ್ಣ ಪಾರ್ಕ್ ಇನ್ನು ಮುಂದೆ ಸದಾ ಚಟುವಟಿಕೆಯ ತಾಣವಾಗಲಿದ್ದು, ಚಿತ್ರೀಕರಣ, ಸಭೆ, ಸಮಾರಂಭ, ತರಬೇತಿ, ಕಾರ್ಯಾಗಾರ ಸೇರಿದಂತೆ ಹಲವು ಚಟುವಟಿಕೆಗೆ ಮುಕ್ತವಾಗಲಿದೆ.

ಮೈಸೂರಿನ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಪಾರ್ಕ್ ದಸರಾ ಮಹೋತ್ಸವ ದಲ್ಲಿ 12-14 ದಿನಗಳವರೆಗೆ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಬಳಕೆಯಾಗು ತ್ತಿತ್ತು. ಅದನ್ನು ಹೊರತುಪಡಿಸಿದರೆ ವಾರಾಂತ್ಯ ರಜೆ ದಿನ ಮಾತ್ರ ಸಂಗೀತ ಕಾರಂಜಿ ಹಾಗೂ ಧ್ವನಿ ಬೆಳಕಿನ ವ್ಯವಸ್ಥೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವರ್ಷದ 365 ದಿನದಲ್ಲಿ ಕೇವಲ 50 ರಿಂದ 60 ದಿನ ಮಾತ್ರ ಕುಪ್ಪಣ್ಣ ಪಾರ್ಕ್‍ನಲ್ಲಿ ಮನರಂಜನೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆದಿಲ್ಲ. ಸೆಪ್ಟಂಬರ್‍ನಿಂದ ವಾಯು ವಿಹಾರಕ್ಕೆ ಅವಕಾಶ ನೀಡಲು ನಿರ್ಧರಿಸ ಲಾಗಿತ್ತು. ಈ ನಡುವೆ ವಿಶಾಲವಾದ ಪಾರ್ಕ್ ನಲ್ಲಿ ವರ್ಷವಿಡೀ ಚಟುವಟಿಕೆ ನಡೆಸ ಬೇಕೆಂದು ತೋಟಗಾರಿಕಾ ಇಲಾಖೆ ನಿರ್ಧ ರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ವಿವಿಧ ಚಟುವಟಿಕೆ ನಡೆಸಲು ಸರ್ಕಾರ ಅಸ್ತು ಎಂದಿದ್ದು, ಕೆಲವು ಚಟುವಟಿಕೆಗೆ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಿದೆ.

ವಿವಾಹ ಪೂರ್ವ ಚಿತ್ರೀಕರಣ: ಇತ್ತೀ ಚಿನ ದಿನಗಳಲ್ಲಿ ವಿವಾಹ ಪೂರ್ವ ಚಿತ್ರೀ ಕರಣ (ಪ್ರಿ ವೆಡ್ಡಿಂಗ್) ಟ್ರೆಂಡ್ ಆಗಿ ಪರಿ ವರ್ತನೆಯಾಗಿದ್ದು, ರಸ್ತೆ ಬದಿ, ಅಂಗಡಿ ಗಳ ಶೆಟರ್ ಬಳಿ, ಕೆರೆ ಏರಿ, ನದಿ ತಟದಲ್ಲಿ ನವ ಜೋಡಿಗಳು ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಂಡು ಬೀಗುತ್ತಿವೆ. ರೋಸ್ ಗಾರ್ಡನ್, ಟೊಪೆರರಿ ಗಾರ್ಡನ್ ಸೇರಿದಂತೆ ವೈವಿಧ್ಯಮಯ ಹೂವಿನ ಗಿಡಗಳೊಂದಿಗೆ ಗಾಜಿನ ಮನೆ, ಆಕರ್ಷಕ ಪರ್ಗೋಲ ಹೊಂದಿರುವ ಕುಪ್ಪಣ್ಣ ಪಾರ್ಕ್ ವಿವಾಹ ಪೂರ್ವ ಚಿತ್ರೀಕರಣ ಹಾಗೂ ಫೋಟೋಶೂಟ್‍ಗೆ ಹೇಳಿ ಮಾಡಿಸಿದ ಜಾಗವೆನಿಸಿದೆ. ಇದುವರೆಗೆ ಯಾವುದೇ ಚಿತ್ರೀಕರಣಕ್ಕೆ ಅವಕಾಶ ನೀಡುತ್ತಿರಲಿಲ್ಲವಾದರೂ ಇನ್ನು ಮುಂದೆ ಚಿತ್ರೀಕರಣ ಸರಾಗವಾಗಿ ನಡೆಯಲಿದೆ. ಅದಕ್ಕಾಗಿ ಕೆಲವು ಮಾನದಂಡ ಹಾಗೂ ಶುಲ್ಕ ಪಾವತಿಸಿದರೆ ವಿವಾಹಪೂರ್ವ ಚಿತ್ರೀಕರಣಕ್ಕೆ ಲಭ್ಯವಾಗಲಿದೆ.

ವಿವಿಧ ಚಟುವಟಿಕೆಗೂ ಅವಕಾಶ: ಕುಪ್ಪಣ್ಣ ಪಾರ್ಕ್‍ನಲ್ಲಿ ವಿವಾಹಪೂರ್ವ ಚಿತ್ರೀ ಕರಣ ಮಾತ್ರವಲ್ಲದೆ ಚಲನಚಿತ್ರ, ಕಿರುಚಿತ್ರ, ಧಾರಾವಾಹಿ, ಪೊಲೀಸ್ ಇಲಾಖೆ ಅನುಮತಿ ಪಡೆದು ಡ್ರೋನ್ ಚಿತ್ರೀಕರಣ, ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ತಾಂತ್ರಿಕ ಸಭೆ, ತರಬೇತಿ, ಸಮಾರಂಭ, ಕಾರ್ಯಾಗಾರಕ್ಕೂ ಕುಪ್ಪಣ್ಣ ಪಾರ್ಕ್ ಲಭ್ಯವಿರುತ್ತದೆ. ಇದರೊಂದಿಗೆ ಪಾರ್ಕ್‍ಗೆ ಸಾರ್ವಜನಿಕರು ಶುಲ್ಕ ಪಾವತಿಸಿ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಶುಲ್ಕ ನಿಗದಿ: ಪಾರ್ಕ್ ಪ್ರವೇಶಿಸಲು ವಯಸ್ಕರಿಗೆ 20 ರೂ., ಮಕ್ಕಳಿಗೆ 10 ರೂ., ಬೈಕ್ ನಿಲುಗಡೆಗೆ 10 ರೂ., ಕಾರ್ ಮತ್ತು ಆಟೋರಿಕ್ಷಾ ನಿಲುಗಡೆಗೆ 20 ರೂ., ವಿವಾಹ ಪೂರ್ವ ಫೋಟೊ, ವಿಡಿಯೋ ಚಿತ್ರೀಕರಣಕ್ಕೆ 10 ಸಾವಿರ (ದಿನಕ್ಕೆ), ಚಲನಚಿತ್ರ ಚಿತ್ರೀಕರಣಕ್ಕೆ 25 ಸಾವಿರ ರೂ.(ದಿನಕ್ಕೆ), ಧಾರಾವಾಹಿ, ಕಿರುಚಿತ್ರಕ್ಕೆ ದಿನಕ್ಕೆ 10 ಸಾವಿರ ರೂ., ಡ್ರೋನ್ ಚಿತ್ರೀಕರಣಕ್ಕೆ 5 ಸಾವಿರ ರೂ., ಸಭೆ, ಸಮಾರಂಭ, ತರಬೇತಿ ಕಾರ್ಯಾಗಾರ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ 5 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಎಲ್ಲಾ ಚಟುವಟಿಕೆಗೆ ನಿಗದಿ ಮಾಡಿರುವ ದರದಲ್ಲಿ ಜಿಎಸ್‍ಟಿ ಒಳಗೊಂಡಿರುತ್ತದೆ. ಈ ಚಟುವಟಿಕೆಗೆ ರಾಜ್ಯಪಾಲರ ಸೂಚನೆ ಮೇರೆಗೆ ತೋಟಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ವಿ. ಸುನಂದಮ್ಮ ಸುತ್ತೋಲೆ ಹೊರಡಿಸಿದ್ದಾರೆ. ಈ ಕುರಿತಂತೆ ಕುಪ್ಪಣ್ಣ ಪಾರ್ಕ್ ಬಳಸಿ ಕೊಳ್ಳಲು ಸಹಾಯಕ ನಿರ್ದೇಶಕ ನವೀನ್ ಅವರ ಮೊ.7899333382 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಆಕರ್ಷಕ ಗಾಜಿನ ಮನೆ: ಕುಪ್ಪಣ್ಣ ಪಾರ್ಕ್‍ನಲ್ಲಿ 2,419 ಚ.ಮೀಟರ್ ವಿಸ್ತೀರ್ಣ ದಲ್ಲಿ ಇಂಡೋ-ಸಾರಾಸೆನಿಕ್ ಶೈಲಿಯಲ್ಲಿ ವೃತ್ತಾಕಾರದಲ್ಲಿ 5.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗಾಜಿನ ಮನೆ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಶುಲ್ಕ ನೀಡಿ ವಿವಿಧ ಸಭೆ, ಸಮಾರಂಭ ನಡೆಸುವವರು ಗಾಜಿನ ಮನೆಯನ್ನೂ ಬಳಸಿಕೊಳ್ಳಬಹುದಾಗಿದೆ. ದಸರಾ ಫಲಪುಷ್ಪ ಪ್ರದರ್ಶನ ಹೊರತುಪಡಿಸಿ ವಾರಾಂತ್ಯದಲ್ಲಿ ನಡೆಯುತ್ತಿದ್ದ ಸಂಗೀತ ಕಾರಂಜಿ ವೀಕ್ಷಣೆ ವೇಳೆ ಸರಾಸರಿ 500 ಮಂದಿ ಗಾಜಿನ ಮನೆ ವೀಕ್ಷಿಸಿದ್ದಾರೆ. ಇದನ್ನು ಮನಗಂಡು ಗಾಜಿನ ಮನೆಯಲ್ಲಿ ಅಪರೂಪ ಛಾಯಾಚಿತ್ರ ಪ್ರದರ್ಶನ ಅಥವಾ ಶೈಕ್ಷಣಿಕ ಉದ್ದೇಶದ ಪ್ರದರ್ಶನ ಆಯೋಜಿಸಲು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್ ಪ್ರಸ್ತಾವನೆ ಕಳುಹಿಸಿದ್ದಾರೆ.

ವಾಯುವಿಹಾರಿಗಳಿಗೆ ಮತ್ತೊಂದು ಪಾರ್ಕ್ ಲಭ್ಯ: ಮೈಸೂರಲ್ಲಿ ಇದುವರೆಗೂ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿಕೆರೆ, ಚಾಮುಂಡಿಬೆಟ್ಟ ಹಾಗೂ ಮೈಸೂರಿನ ವಿವಿಧ ಪಾರ್ಕ್‍ಗಳಲ್ಲಿ ವಾಯುವಿಹಾರಕ್ಕೆ ಅವಕಾಶವಿದೆ. ಈ ಹಿಂದೆ ಕುಪ್ಪಣ್ಣ ಪಾರ್ಕ್ ನಲ್ಲಿ ಅನೈತಿಕ ಚಟುವಟಿಕೆ, ಪಿಕ್‍ಪಾಕೆಟರ್ ಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕುಪ್ಪಣ್ಣ ಪಾರ್ಕ್‍ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಇದೀಗ ವಾಯುವಿಹಾರಿಗಳಿಗೂ ಅವಕಾಶ ನೀಡಲಾ ಗುತ್ತಿದೆ. ಪ್ರತಿದಿನ ಬೆಳಗ್ಗೆ 6ರಿಂದ 9 ಗಂಟೆ, ಸಂಜೆ 5ರಿಂದ 7 ಗಂಟೆವರೆಗೂ ಕುಪ್ಪಣ್ಣ ಪಾರ್ಕ್‍ನಲ್ಲಿ ವಾಯು ವಿಹಾರ ಮಾಡಲು ಅವಕಾಶ ನೀಡಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿ, ನಾಲ್ವರು ಉದ್ಯಾನವನದ ಸಿಬ್ಬಂದಿ ಕುಪ್ಪಣ್ಣ ಪಾರ್ಕ್‍ನಲ್ಲಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಪಾರ್ಕ್‍ನಲ್ಲಿ ವಾಕಿಂಗ್ ಪಾತ್ ಇರುವುದರಿಂದ ವಾಯುವಿಹಾರಿಗಳಿಗೆ ಸುರಕ್ಷಿತವಾಗಿ ವಾಯುವಿಹಾರ ಮಾಡಲು ಸೂಕ್ತ ಸ್ಥಳ ದೊರೆತಂತಿದೆ.

ಎಂ.ಟಿ.ಯೋಗೇಶ್‍ಕುಮಾರ್

Translate »