ವಿಷ್ಣು, ಎಸ್‍ಪಿಬಿ, ರಾಜನ್-ನಾಗೇಂದ್ರ   ಸ್ಮರಣಾರ್ಥ ಡಿ.27ಕ್ಕೆ ಸಂಗೀತ ಸಂಜೆ
ಮೈಸೂರು

ವಿಷ್ಣು, ಎಸ್‍ಪಿಬಿ, ರಾಜನ್-ನಾಗೇಂದ್ರ  ಸ್ಮರಣಾರ್ಥ ಡಿ.27ಕ್ಕೆ ಸಂಗೀತ ಸಂಜೆ

December 25, 2020

ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ

ಮೈಸೂರು, ಡಿ.24(ಎಂಟಿವೈ)- ದಿವಂಗತರಾಗಿರುವ ಸಾಹಸಸಿಂಹ ಡಾ.ವಿಷ್ಣು ವರ್ಧನ್, ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಅವರ ಸ್ಮರಣಾರ್ಥ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಡಿ.27ರ ಸಂಜೆ 5.30ರಿಂದ ರಾತ್ರಿ 9.30ರವರೆಗೆ ಸಂಗೀತ ರಸಮಂಜರಿ ಮತ್ತು ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾತಿ ಫೌಂಡೇಷನ್ ಸಂಸ್ಥಾಪಕ ಎಂ.ಡಿ.ಪಾರ್ಥಸಾರಥಿ ಅವರು, ಪಾತಿ ಫೌಂಡೇಷನ್, `ನನ್ನ ಹೆಸರು ಕಿಶೋರ-7 ಪಾಸ್ 8’ ಚಿತ್ರತಂಡ, ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಪರಿಸರ ಸ್ನೇಹಿ ತಂಡದಿಂದ ಕನ್ನಡ ಚಿತ್ರರಂಗದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್, ಹಿರಿಯ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಸ್ಮರಣಾರ್ಥ `ಸಂಗೀತ ಸಂಜೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೊಸ ಗಾಯಕರಿಗೆ ಪೆÇ್ರೀತ್ಸಾಹ ನೀಡಲಿರುವ ಈ ಕಾರ್ಯಕ್ರಮದಲ್ಲಿ ವಿಷ್ಣು ನಟಿಸಿದ, ಎಸ್‍ಪಿಬಿ ಹಾಡಿದ, ರಾಜನ್-ನಾಗೇಂದ್ರ ಸಂಗೀತ ನಿರ್ದೇಶಿಸಿದ ಚಿತ್ರಗಳ ಹಾಡುಗಳನ್ನೇ ಯುವಗಾಯಕರು ಹಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೇಯರ್ ತಸ್ನೀಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದÀ ಶಂಕರ್ ನಾರಾಯಣ ಶಾಸ್ತ್ರಿ (ಧಾರ್ಮಿಕ), ಜಗ್ಗಪ್ಪ (ಕಲೆ), ಎನ್.ಎಂ.ನವೀನ್ ಕುಮಾರ್ (ಸಮಾಜ ಸೇವೆÀ), ನಜರ್‍ಬಾದ್ ನಟರಾಜ್ (ಸಾಮಾಜಿಕ), ಬಿ.ದೊರೆಸ್ವಾಮಿ (ರಂಗಭೂಮಿ), ಮಹೇಶ್ವರನ್ (ಮುದ್ರಣ ಮಾಧ್ಯಮ), ಕೆ.ಪಿ.ನಾಗರಾಜ್ (ದೃಶ್ಯ ಮಾಧ್ಯಮ), ಮಹೇಂದ್ರಸಿಂಗ್ ಕಾಳಪ್ಪ (ಸಾಮಾಜಿಕ), ಮುತ್ತಣ್ಣ (ಆರೋಗ್ಯ), ಸುರೇಶ್ ಬಾಬು (ಆರೋಗ್ಯ), ದಶರಥ್ (ಸಮಾಜಸೇವೆ) ಅವರನ್ನು ಸನ್ಮಾನಿಸಲಾಗುವುದು ಎಂದರು. ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪರಿಸರ ಸ್ನೇಹಿ ತಂಡದ ಅಧ್ಯP್ಷÀ ಡಿ.ಲೋಹಿತ್ ಸುದ್ದಿಗೋಷ್ಠಿಯಲ್ಲಿದ್ದರು.

 

 

Translate »