ಮೈಸೂರಿನ ಯುವಜನೋತ್ಸವದಲ್ಲಿ ಸಾಂಸ್ಕøತಿಕ ಕಲರವ
ಮೈಸೂರು

ಮೈಸೂರಿನ ಯುವಜನೋತ್ಸವದಲ್ಲಿ ಸಾಂಸ್ಕøತಿಕ ಕಲರವ

December 25, 2020

ಮೈಸೂರು,ಡಿ.24(ಎಂಟಿವೈ)- ಕೊರೊನಾ ಹಿನ್ನೆಲೆ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧ ಗೊಳಿಸಿ ಮಂಕಾಗಿದ್ದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಯುವಜನೋತ್ಸವದಲ್ಲಿ ವಿವಿಧ ಪ್ರಕಾರ ಗಳ ಕಲಾವೈಭವ ಕ್ರೀಡಾಂಗಣವನ್ನು ಕಳೆ ಗಟ್ಟಿಸಿತ್ತು. ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಯುವ ಕಲಾವಿದರು ತಮ್ಮ ಪ್ರತಿಭೆ ಅನಾ ವರಣಗೊಳಿಸಿ ಗಮನ ಸೆಳೆದರು.

ಸ್ವಾಮಿ ವಿವೇಕಾನಂದರ ಜನ್ಮದಿನ ಹಿನ್ನೆಲೆ ಯಲ್ಲಿ ದೆಹಲಿಯಲ್ಲಿ 2021ರ ಜ.12ರಿಂದ 18ರವರೆಗೆ ನಡೆಯಲಿರುವ `ರಾಷ್ಟ್ರೀಯ ಯುವ ಜನ ಸಪ್ತಾಹ’ ಕಾರ್ಯಕ್ರಮದಲ್ಲಿ ರಾಜ್ಯ ವನ್ನು ಪ್ರತಿನಿಧಿಸಬೇಕಾದ ಯುವ ಕಲಾವಿದ ರನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲೆಗಳಲ್ಲೂ ಯುವಜನೋತ್ಸವ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರನ್ನು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಕಳು ಹಿಸಲಾಗುತ್ತದೆ. ಈ ದಿಸೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ 9 ಕಲಾಪ್ರಕಾರಗಳ ವಿವಿಧ ವಿಭಾಗಗಳಲ್ಲಿ 15ರಿಂದ 29 ವರ್ಷದೊಳ ಗಿನ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ನೀಡಿದರು.

ಮೊಳಗಿದ ಕಲಾವೈಭವ: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎನ್‍ಎಸ್‍ಎಸ್ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನೋತ್ಸವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರ ಸಂಘ, ಯುವತಿಯರ ಮಂಡಳಿ ಸದ ಸ್ಯರು ಪಾಲ್ಗೊಂಡಿದ್ದರು.

ಯುವಜನೋತ್ಸವಕ್ಕೆ ಚಾಲನೆ: ಯುವ ಜನೋತ್ಸವವನ್ನು ಜಿಪಂ ಅಧ್ಯಕ್ಷೆ ಬಿ.ಸಿ.ಪರಿ ಮಳ ಶ್ಯಾಮ್ ಉದ್ಘಾಟಿಸಿದರು. ಬಳಿಕ ಮಾತ ನಾಡಿ, ಯುವಜನರ ಪ್ರತಿಭಾ ಶೋಧದಲ್ಲಿ ಯುವ ಸಬಲೀಕರಣ-ಕ್ರೀಡಾ ಇಲಾಖೆ ಮಹ ತ್ತರ ಪಾತ್ರ ವಹಿಸಲಿದೆ. ವಿಶ್ವದ ಯಾವುದೇ ದೇಶದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿನ್ನೆಲೆ ಗಮನಿಸಿದರೆ, ಅವರೆ ಲ್ಲರೂ ಕ್ರೀಡೆಗಳಿಂದಲೇ ಮುನ್ನಲೆಗೆ ಬಂದಿ ರುವುದು ಕಂಡು ಬರುತ್ತದೆ. ಕ್ರೀಡೆಯಿಂ ದಾಗಿ ಹಲವರ ಉಜ್ವಲ ಭವಿಷ್ಯವಿದ್ದು, ಅಗತ್ಯ ಪ್ರೋತ್ಸಾಹ ನೀಡಬೇಕಿದೆ. ಮುಂದಿನ ದಿನ ಗಳಲ್ಲಿ ವಿದ್ಯಾರ್ಥಿ, ಯುವಜನರಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾನ್ವೇಷಣಾ ಕಾರ್ಯ ಕ್ರಮ ಹೆಚ್ಚಾಗಿ ರೂಪಿಸಬೇಕಿದೆ ಎಂದರು.

ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಮಾತ ನಾಡಿ, ಸದ್ಯ ಭಾರತದ ಜನಸಂಖ್ಯೆ 133 ಕೋಟಿ ಇದೆ. ಅದರಲ್ಲಿ ಶೇ.67ರಷ್ಟು ಯುವ ಜನರೇ ಇದ್ದಾರೆ. ಇದರಿಂದಲೇ ಹಲವು ರಾಷ್ಟ್ರಗಳು ಭಾರತದತ್ತ ದೃಷ್ಟಿ ಹಾಯಿಸು ವಂತಾಗಿದೆ. ಮುಂದಿನ ದಿನಗಳಲ್ಲಿ ಯುವಜನತೆ ಸಾಧನೆಗೈಯ್ಯುವ ಮೂಲಕ ದೇಶದ ಕೀರ್ತಿ ಪತಾಕೆ ಉತ್ತುಂಗಕ್ಕೆ ಒಯ್ಯಲ್ಲಿದ್ದಾರೆ ಎಂದರು.

ಹಿಂದೆ ಮಕ್ಕಳ ಭವಿಷ್ಯವನ್ನು ಪೋಷ ಕರು ನಿರ್ಧರಿಸುತ್ತಿದ್ದರು. ಈಗ ಮಕ್ಕಳೇ ತಮ್ಮ ಭವಿಷ್ಯ ತಾವೇ ನಿರ್ಧರಿಸಿಕೊಳ್ಳುವಂತಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಸಮೂ ಹದ ಹೊಸ ಪ್ರತಿಭೆ ಗುರುತಿಸುವುದಕ್ಕೆ ಸರ್ಕಾ ರದ ವಿವಿಧ ಇಲಾಖೆಗಳು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಜೀವನದಲ್ಲಿ ಶಿಸ್ತು ಪ್ರಮುಖ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಕ್ರೀಡೆಗಳಲ್ಲಿ ತೊಡಗಿಸಿ ಕೊಂಡರೆ ದೈಹಿಕ ಸಾಮಥ್ರ್ಯ ವೃದ್ಧಿಯಾಗು ತ್ತದೆ. ಕ್ರೀಡಾ ಮನೋಭಾವ ಬೆಳೆಸಿಕೊಂಡು, ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಯಾವುದೇ ವಿಧದ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ ಪೋಷಕರು ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವತ್ತ ಗಮನ ಹರಿಸಬೇಕು. ಕ್ರೀಡಾಸಕ್ತಿ ಕೇವಲ ಒಂದೆರಡು ದಿನಕ್ಕೆ ಸೀಮಿತ ವಾಗಬಾರದು. ಓದಿನಲ್ಲಿರುವಂತೆ ಕ್ರೀಡೆ ಯಲ್ಲೂ ನಿರಂತರ ಆಸಕ್ತಿ ಇರಬೇಕು. ಯಾರಲ್ಲಿ ಶಿಸ್ತು, ದೈಹಿಕ ಸಾಮಥ್ರ್ಯ ಹೆಚ್ಚಾ ಗಿರುತ್ತದೋ ಅವರು ಸದಾ ಚಟುವಟಿಕೆ ಯಿಂದ ಇರುತ್ತಾರೆ. ಪೊಲೀಸರನ್ನು ಮಧ್ಯ ರಾತ್ರಿ 12 ಗಂಟೆಗೆ ಕರೆದರೂ, ಪ್ರಶ್ನೆ ಮಾಡದೆ ಬರುತ್ತಾರೆ. ಅದೇ ರೀತಿ ಬೇರೆ ಇಲಾಖೆ ಸಿಬ್ಬಂದಿಗಳನ್ನು ಕರೆದರೆ ಬರುತ್ತಾರೆಯೇ? ಪೊಲೀಸರಲ್ಲಿ ಶಿಸ್ತು ಇರುವುದರಿಂದ ಪ್ರಶ್ನೆ ಮಾಡದೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಜೀವನದಲ್ಲಿ ಶಿಸ್ತು ಅಗತ್ಯ ಎಂದರು.

ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್. ಆರ್.ಮಹಾದೇವಸ್ವಾಮಿ, ಜಿಪಂ ಉಪಾ ಧ್ಯಕ್ಷೆ ಗೌರಮ್ಮ ಸೋಮಶೇಖರ್, ಆರೋಗ್ಯ -ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ನಾಥನ್ ಮಾತನಾಡಿದರು. ಪಾಲಿಕೆ ಸದಸ್ಯ ಸತ್ಯರಾಜು ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇ ಶಕ ಜಿ.ಓಂಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಸಿದ್ದ ರಾಮಯ್ಯ ಉಪಸ್ಥಿತರಿದ್ದರು.

Translate »