ಮೈಸೂರು ಜಿಲ್ಲೆ; 62 ಮಂದಿಗೆ ಸೋಂಕು, 53 ಮಂದಿ ಗುಣಮುಖ
ಮೈಸೂರು

ಮೈಸೂರು ಜಿಲ್ಲೆ; 62 ಮಂದಿಗೆ ಸೋಂಕು, 53 ಮಂದಿ ಗುಣಮುಖ

December 27, 2020

ಮೈಸೂರು, ಡಿ.26(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 62 ಮಂದಿಗೆ ಸೋಂಕು ತಗುಲಿದ್ದು, 53 ಮಂದಿಗೆ ಗುಣವಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಈವರೆಗೆ 52,186 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಒಟ್ಟು 50,630 ಮಂದಿ ಗುಣ ಕಂಡಿದ್ದಾರೆ. ಈವರೆಗೆ 1,008 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 548 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಶನಿವಾರ ಹೊಸದಾಗಿ 857 ಮಂದಿಗೆ ಸೋಂಕು ದೃಢಪಟ್ಟಿದೆ. 946 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ಸೋಂಕಿತರ ಸಂಖ್ಯೆ 9,15,345ಕ್ಕೆ ಏರಿದೆ. 8,89,881 ಮಂದಿಗೆ ಗುಣವಾಗಿದೆ.

Translate »