ತಾಲೂಕು ಪತ್ರಕರ್ತರ ಸಂಘಗಳಿಗೆ ಬಿಸಿ ನೀರು ಯಂತ್ರದ ಕೊಡುಗೆ
ಮೈಸೂರು

ತಾಲೂಕು ಪತ್ರಕರ್ತರ ಸಂಘಗಳಿಗೆ ಬಿಸಿ ನೀರು ಯಂತ್ರದ ಕೊಡುಗೆ

December 27, 2020

ಮೈಸೂರು, ಡಿ.26(ಎಂಟಿವೈ)- ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರ ಸಂಘಗಳಿಗೆ ಬಿಸಿ ನೀರು ಯಂತ್ರವನ್ನು ಬನ್ನೂರಿನ ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಕೊಡುಗೆಯಾಗಿ ನೀಡಿದರು.

ಮಹೇಂದ್ರ ಸಿಂಗ್ ಕಾಳಪ್ಪ ಅವರು ಒದಗಿ ಸಿದ ಬಿಸಿ ನೀರು, ತಣ್ಣೀರು ಒದ ಗಿಸುವ ಹಾಗೂ ರೆಫ್ರಿಜರೇಟರ್ ಸೌಲಭ್ಯವುಳ್ಳ 6 ಉಪಕರಣಗಳನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರು ಸ್ವೀಕರಿಸಿದರು. ಬಳಿಕ ಜಿಲ್ಲೆಯ 6 ತಾಲೂಕುಗಳ ಪತ್ರಕರ್ತರ ಸಂಘಗಳ ಪದಾ ಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಮಹೇಂದ್ರ ಸಿಂಗ್ ಕಾಳಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ನಾಗೇಶ್ ಪಾಣತ್ತಲೆ, ನಗರ ಕಾರ್ಯದರ್ಶಿ ರಂಗಸ್ವಾಮಿ, ಸಾಹಿತಿ ಬನ್ನೂರು ರಾಜು ಹಾಗೂ ವಿವಿಧ ತಾಲೂಕು ಪತ್ರಕರ್ತರ ಸಂಘಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

 

Translate »