ಮೈಸೂರು

ಜನಪದ ಕಲಾಪ್ರಕಾರ ತರಬೇತಿ ಸಮಾರೋಪ

December 21, 2020

ಮೈಸೂರು, ಡಿ.20(ಎಸ್‍ಪಿಎನ್)- ಮೈಸೂರಿನ ಕಲಾಮಂದಿರ ಆವರಣದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಕನ್ನಡ-ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ `30 ದಿನಗಳ ರಂಗಭೂಮಿ ಮತ್ತು ಜನಪದ ಕಲಾಪ್ರಕಾರ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.

ಸಮಾರಂಭ ಉದ್ಘಾಟಿಸಿದ ಜಾನಪದ ಗಾಯಕ ಲಕ್ಷ್ಮಿರಾಮ್, ಜಾನಪದ ಕಲೆ ಮತ್ತು ನೃತ್ಯ ಪ್ರಕಾರ ಉಳಿಸಿ-ಬೆಳಸುವ ದಿಸೆಯಲ್ಲಿ ಗೌತಮ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ರಂಗಭೂಮಿ ಮತ್ತು ಜಾನಪದ ಕಲೆ ಕಲಿಯುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ ಎಂದರು.

ಇದೇ ವೇಳೆ ಕಲಾವಿದ ಎಸ್.ಡಿ.ಸಣ್ಣಸ್ವಾಮಿ, ಗಾಯಕ ಪಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಶಿಬಿರಾರ್ಥಿಗಳು ಮಲೈ ಮಹದೇಶ್ವರನ ಹಾಡಿಗೆ ನೃತ್ಯ ಪ್ರದರ್ಶನ ನೀಡಿ ನೆರೆದವರನ್ನು ರಂಜಿಸಿದರು. ಉಪನ್ಯಾಸಕ ಟಿ.ಎಂ.ಶ್ರೀಧರಮೂರ್ತಿ, ಗೌತಮ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್‍ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಉಪಸ್ಥಿತರಿದ್ದರು.

 

Translate »