6 ಸಾಧಕಿಯರಿಗೆ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ
ಮೈಸೂರು

6 ಸಾಧಕಿಯರಿಗೆ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ

December 21, 2020

ಮೈಸೂರು, ಡಿ.20(ವೈಡಿಎಸ್)- ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್‍ನಲ್ಲಿ ಶನಿವಾರ ನಡೆದ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳ 6 ಮಹಿಳಾ ಸಾಧಕರಿಗೆ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುನಂದ ಪಾಲನೇತ್ರ (ಸಾರ್ವಜನಿಕ), ಪಿ.ಬಿ.ಇಂದುಕಲಾ ಅರಸ್(ಶಿಕ್ಷಣ), ಡಾ.ಬಿ.ಎಸ್. ಸೀತಾಲಕ್ಷ್ಮಿ(ವೈದ್ಯಕೀಯ), ಲೀಲಾ ವಾಸುದೇವ್ (ಸಂಶೋಧನೆ), ಶಶಿಕಲಾ ಸುಬ್ಬಣ್ಣ(ಸಮಾಜ ಸೇವೆ), ಸಬಿಕೆ ನೂಬಾಯಾ (ಪರಿಸರ ವಿಜ್ಞಾನ) ಅವರಿಗೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಎಂಜಿಆರ್ ಅರಸ್ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ ಮಾಡಿದರು.

ಇದಕ್ಕೂ ಮುನ್ನ ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಅವರು ಶ್ರೀ ಸುತ್ತೂರು ಶಿವರಾತ್ರೀಶ್ವರ ರಾಜೇಂದ್ರ ಮಹಾ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ಅಧ್ಯಕ್ಷೆ ಚುಟುಕುಸಿರಿ ರತ್ನ ಹಾಲಪ್ಪಗೌಡ ಇದ್ದರು.

Translate »